ಎಲ್ಲರಿಗೂ ನಮಸ್ಕಾರ, Aadhar Kaushal Scholarship ಗೆ ಅರ್ಜಿ ಸಲ್ಲಿಸಬೇಕೆ..? ಅರ್ಜಿ ಸಲ್ಲಿಸಲು ಯಾರು ಅರ್ಹರು ಹಾಗೂ ಯಾವ ದಾಖಲೆಗಳು ಬೇಕಾಗುತ್ತವೆ ಎಂದು ತಿಲಿದುಕೊಳ್ಳಬೇಕೆ..? ಈ ಎಲ್ಲಾ ಮಾಹಿತಿಯನ್ನು ಲೇಖನದಲ್ಲಿ ನೀಡಲಿದ್ದೇವೆ ಓದಿ.
ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ಆಧಾರ್ ಕೌಶಲ್ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲವನ್ನು ಒದಗಿಸಲು ಈ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ವಿದ್ಯಾರ್ಥಿವೇತನದ ಲಾಭ ಪಡೆದುಕೊಳ್ಳಬಹುದು.
ಹೌದು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು 10,000 ರೂ. ರಿಂದ 50,000 ರೂ. ವರೆಗೆ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ. ನೀವು ಕೊಡ ಅರ್ಜಿ ಸಲ್ಲಿಸಿ ಆಧಾರ್ ಕೌಶಲ್ ವಿದ್ಯಾರ್ಥಿವೇತನ ಸ್ಕಾಲರ್ಶಿಪ್’ನ ಲಾಭ ಪಡೆಯಿರಿ.
ಪ್ರಸ್ತುತ ಭಾರತದಾದ್ಯಂತ ಸಾಮಾನ್ಯ ಅಥವಾ ವೃತ್ತಿಪರ ಪದವಿ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ದೈಹಿಕ ವಿಕಲಾಂಗ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲವನ್ನು ಒದಗಿಸಲು ವಿದ್ಯಾರ್ಥಿವೇತನವನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಲೆಕ್ಕಿಸದೆ ಸಮಾನ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
Aadhar Kaushal Scholarship ಅರ್ಹತೆಗಳು:
- ಪ್ರಸ್ತುತ ಶೈಕ್ಷಣಿಕ ವರ್ಷದ ಸಾಮಾನ್ಯ ಅಥವಾ ವೃತ್ತಿಪರ ಪದವಿ ಕೋರ್ಸ್ಗಳಿಗೆ ದಾಖಲಾದ ದೈಹಿಕ ವಿಕಲಾಂಗ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
- INR 2.5 ರಿಂದ 3 ಲಕ್ಷದ ಒಳಗೆ ಕುಟುಂಬದ ಆದಾಯ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
- ಪ್ರಸ್ತುತ ಅಸ್ತಿತ್ವದಲ್ಲಿರುವ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ದಾಖಲಾದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಸಾದ್ಯವಿಲ್ಲ.
Aadhar Kaushal Scholarship 2024 ದಾಖಲೆಗಳು:
- ಅರ್ಜಿದಾರರ ಪೋಟೋ
- ಆಧಾರ್ ಕಾರ್ಡ್
- ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಪದವಿಪೂರ್ವ (ಸಾಮಾನ್ಯ ಮತ್ತು ವೃತ್ತಿಪರ) ಕೋರ್ಸ್ ಗಳಲ್ಲಿ ಪ್ರಸ್ತುತ ದಾಖಲಾತಿಯ ಪುರಾವೆ
- ಬೋಧನಾ/ಕಾರ್ಯಕ್ರಮದ ಶುಲ್ಕಗಳು, ಪರೀಕ್ಷಾ ಶುಲ್ಕಗಳು, ಅಭಿವೃದ್ಧಿ ಶುಲ್ಕಗಳು ಮತ್ತು ಪ್ರವೇಶ ಶುಲ್ಕಗಳು ಸೇರಿದಂತೆ ಕೋರ್ಸ್ ಶುಲ್ಕಗಳಿಗೆ ಸಂಬಂಧಿಸಿದ ವೆಚ್ಚಗಳ ದಾಖಲಾತಿ.
- ಹಿಂದಿನ ವರ್ಷದ ಅಂಕಪಟ್ಟಿ ಮತ್ತು 12ನೇ ತರಗತಿಯ ಅಂಕಪಟ್ಟಿ.
- ಆದಾಯ ಪ್ರಮಾಣಪತ್ರ, ಜೊತೆಗೆ ITR/ಸಂಬಳ ಚೀಟಿಗಳು ಮತ್ತು ಸರ್ಕಾರದ ಅಧಿಕೃತ ಆದಾಯ ಪ್ರಮಾಣಪತ್ರದಂತಹ ಪೋಷಕ ದಾಖಲೆಗಳು.
- ಅಂಗವೈಕಲ್ಯದ ಮಾನ್ಯ ಸರ್ಕಾರಿ ಪ್ರಮಾಣಪತ್ರ
- ವಿದ್ಯಾರ್ಥಿಯು ಪ್ರಸ್ತುತ ಯಾವುದೇ ವಿದ್ಯಾರ್ಥಿವೇತನವನ್ನು ಪಡೆಯುತ್ತಿಲ್ಲ ಎಂದು ದೃಢೀಕರಿಸುವ ಅರ್ಜಿದಾರ, ಕುಟುಂಬ ಅಥವಾ ಸಂಸ್ಥೆಯಿಂದ declaration ಪಾರ್ಮ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-07-2024
ಪ್ರಮುಖ ಲಿಂಕ್’ಗಳು:
Apply Online ಲಿಂಕ್: Apply ಮಾಡಿ
ಇತರೆ ಮಾಹಿತಿಗಳನ್ನು ಓದಿ:
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನ ಸಹಾಯ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ
PUC ಪಾಸಾದವರಿಗೆ 20,000 ರೂಪಾಯಿ ಪ್ರೋತ್ಸಾಹಧನ