ಅನ್ನಭಾಗ್ಯ ಯೋಜನೆ: DBT Status Check ಮಾಡಿ | Anna Bhagya DBT Status Check Online 2024 @ahara.kar.nic.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ.. ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯಾ? ಎಷ್ಟು ಹಣ ವರ್ಗಾವಣೆ ಆಗಿದೆ..? ಎಂಬುದನ್ನು Anna Bhagya DBT Status Check ಮಾಡುವ ವಿಧಾನನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಓದಿರಿ.

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದರು. ಅದರಂತೆ ಅನ್ನ ಭಾಗ್ಯ ಯೋಜನೆಯನ್ನು ಜಾರಿ ತಂದು 5 ಕೆಜಿ ಮತ್ತು ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಪ್ರತಿ ಕೆ.ಜಿಗೆ 34 ರೂ. ರಂತೆ ಪ್ರತಿ ಸದಸ್ಯರಿಗೆ 170 ರೂ. ನೀಡಲಾಗುತ್ತಿದೆ.

BPL ಕಾರ್ಡ್‌ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿದವರ ಬ್ಯಾಂಕ್‌ ಖಾತೆಗೆ Anna Bhagya DBT ಮೂಲಕ ಹಣ ಜಮಾ ಮಾಡಲಾಗುತ್ತಿದೆ. ಅದರಂತೆ ಪ್ರತಿ ತಿಂಗಳು ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಕರ್ನಾಟಕ ಸರ್ಕಾರ ಹಣ ವರ್ಗಾವಣೆ ಮಾಡುತ್ತಿದೆ. ನಿಮ್ಮ ಬ್ಯಾಂಕ್‌ ಖಾತೆಗೆ ಏಷ್ಟು ಹಣ ಜಮಾ ಆಗಿದೇ ಎಂದುದನ್ನು ಚೆಕ್‌ ಮಾಡಿಕೊಳ್ಳಿ.

Ration Card Amount in Karnataka

ವಿಧಾನ ಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೇಸ್ ಪಕ್ಷ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕುಟುಂಬದ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ವಿತರಿಸುವ ಭರವಸೆ ನೀಡಿತ್ತು. ಆದರೆ ಬೇಕಾಗುವಷ್ಟು ಅಕ್ಕಿ ಲಭ್ಯವಾಗದ ಕಾರಣ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಅನ್ನಭಾಗ್ಯ ಹಣ ನೀಡುವ ಯೋಜನೆ ರೂಪಿಸಿದೆ. ಅದರಂತೆ BPL Card ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ 170 ರೂ. ರಂತೆ ಹಣವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಹಣ ಜಮಾ ಮಾಡಲಾಗುತ್ತಿದೆ.

Anna Bhagya DBT Status Check 2024

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆಯಾ ಹಾಗೂ ಎಷ್ಟು ಹಣ ಜಮಾ ಆಗಲಿದೆ ಎಂಬುದನ್ನು ತಿಳಿಯಲು ಈ ಕೇಳಗೆ‌ ನೀಡಲಾಗಿರುವ ವಿಧಾನವನ್ನು ಅನುಸರಿಸಿ ಚೆಕ್‌ ಮಾಡಿಕೊಳ್ಳಬಹುದು.

  • Step-1: ಮೊದಲನೇಯದಾಗಿ ಕೇಳಗೆ ನೀಡಿರುವ ಕರ್ನಾಟಕ ಆಹಾರ ಇಲಾಖೆಯ ವೆಬ್‌ಸೈಟ್‌ (ahara.kar.nic.in/lpg) ಲಿಂಕ್ ಮೇಲೆ ಕ್ಲಿಕ್‌ ಮಾಡಿ.
  • Step-2: ಅಲ್ಲಿ ವಿಭಾಗವಾರು ಮೂರು ಲಿಂಕ್‌ಗಳಿರುವ‌ ಪೆಜ್‌ ಒಪನ್‌ ಆಗುತ್ತದೆ. ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. ಉದಾ. ONLY FOR BENGALURU DISTRICTS CLICK HERE ಎಂದಿರುತ್ತದೆ.
Anna Bhagya DBT Status Check Online 2024 Step-1
Annabhagya DBT Payment Status Check
  • Step-3: ಮುಂದಿನ ಪೇಜ್‌ನಲ್ಲಿ ಕೊನೆಯ ಆಯ್ಕೆ ನೇರ ನಗದು ವರ್ಗಾವಣೆಯ ಸ್ಥಿತಿ (Status Of DBT) ಎಂಬ Option ಕಾಣುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ.
Anna Bhagya DBT Status Check Online 2024 Step-2
ahara kar nic in dbt status
  • Step-4: Status of DBT ಪುಟ ಓಪನ್‌ ಆಗುತ್ತದೆ ಅದರಲ್ಲಿ Select Year, Select Month ಅಂತ ಇರುತ್ತದೆ. ನೀವು ಯಾವ ತಿಂಗಳ Anna Bhagya DBT Status Check ಮಾಡಬೇಕೆಂದುಕೊಂಡಿದ್ದೀರಿ ಆ ತಿಂಗಳನ್ನು ಆಯ್ಕೆ ಮಾಡಿ. ನಂತರ Enter RC Number/RC No. ಎಂಬಲ್ಲಿ ನಿಮ್ಮ ರೇಷನ್‌ ಕಾರ್ಡ್‌ ನಂಬರ್‌ ಎಂಟರ್‌ ಮಾಡಿ. GO ಬಟನ್‌ ಮೇಲೆ ಕ್ಲಿಕ್‌ ಮಾಡಿ.
Anna Bhagya DBT Status Check Online 2024 Step-3
Anna Bhagya Amount Status
  • Step-5: ಅಂತಿಮವಾಗಿ ನಿಮ್ಮ ರೇಷನ್‌ ಕಾರ್ಡ್‌ನಲ್ಲಿರುವ ಕುಟುಂಬದ ಮುಖ್ಯಸ್ಥರ ಹೆಸರು ಕಾಣುತ್ತದೆ, ಅವರ ಆಧಾರ ನಂಬರ್‌ನ ಕೊನೆಯ 4 ಸಂಖ್ಯೆ, ನಿಮ್ಮ ಕುಟುಂಬ ಸದಸ್ಯರ ಸಂಖ್ಯೆ, ಅಕ್ಕಿ ಸಿಗುವ ಪ್ರಮಾಣ ಮತ್ತು ನಿಮ್ಮ ಖಾತೆಗೆ ಜಮಾ ಆಗುವ ಹಣದ ವಿವರಗಳನ್ನು ಅಲ್ಲಿ ನೀಡಿರುತ್ತಾರೆ. ನೀವು Anna Bhagya DBT Status Check ಮಾಡಿಕೊಂಡು ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಲಿದೆ ಎಂಬುದನ್ನು ನೋಡಬಹುದು.
Anna Bhagya DBT Status Check Online 2024 Step-4
Anna Bhagya Scheme DBT Status
  • Step-6: ನಿಮ್ಮ ಪಡಿತರ ಚೀಟಿಯಲ್ಲಿರುವ ಮುಖ್ಯಸ್ಥರ ಆಧಾರಗೆ ಲಿಂಕ್‌ ಇರುವ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಿರುವ ಮಾಹಿತಿ ಈ ಕೇಳಗಿನಂತೆ ಲಭ್ಯವಾಗುತ್ತದೆ.
Anna Bhagya DBT Status Check Online 2024 Step-5
ahara kar nic in dbt status

ಪ್ರಮುಖ ಲಿಂಕ್‌ಗಳು:
Anna Bhagya DBT Status Check Link:‌
Check Online
ಅಧಿಕೃತ ವೆಬ್‌ಸೈಟ್: ahara.kar.nic.in, https://ahara.kar.nic.in/lpg/, ahara.kar.nic.in/status2/status_of_dbt.aspx

ಕೊನೆಯ ಮಾತು: ಅನ್ನಭಾಗ್ಯ ಯೋಜನೆಯ Anna Bhagya Scheme DBT Status ಅನ್ನು ಪರಿಶೀಲಿಸಲು ನಿಮಗೆ ಈ ಲೇಖನ ಸಹಾಯವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್‌ ಗ್ರೂಪ್‌ಗೆ ಅಥವಾ Subscribe ಆಗಿರಿ. ಧನ್ಯವಾದಗಳು.

ಇತರೆ ಮಾಹಿತಿಗಳನ್ನು ಓದಿ:

ಗೃಹಲಕ್ಷ್ಮೀ ಯೋಜನೆಯ 8 ನೇ ಕಂತಿನ 2,000 ರೂಪಾಯಿ ಯಾವಾಗ ಜಮಾ!

ಹೊಸ ರೇಷನ್‌ ಕಾರ್ಡ್‌ Status ಚೆಕ್‌ ಮಾಡಿ

ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ

ಕೃಷಿ ಭಾಗ್ಯ ಯೋಜನೆ: ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ

ರೇಷನ್‌ ಕಾರ್ಡ್‌ ರದ್ದು: ಹೊಸ ಪಟ್ಟಿ ಬಿಡುಗಡೆ

ರೇಷನ್ ಕಾರ್ಡ್ ತಿದ್ದುಪಡಿ, ಹೆಸರು ಸೇರ್ಪಡೆ ಪ್ರಕ್ರಿಯೆ ಆರಂಭ

Telegram Group Join Now
WhatsApp Group Join Now

Leave a Comment

error: Content is protected !!