ಎಲ್ಲರಿಗೂ ನಮಸ್ಕಾರ, ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ ಮಹತ್ವದ ಮಾಹಿತಿ ನೀಡಿದ್ದು, ಪಡಿತರ ಚೀಟಿ (BPL Ration Card Karnataka) ಹೊಂದಿದ ಎಲ್ಲರೂ ಈ ಮಾಹಿತಿಯನ್ನು ಓದಿ.
ಸರ್ಕಾರ ಸದ್ಯದಲ್ಲೇ ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡಲು ಮುಂದಾಗಿದ್ದು. ಅರ್ಹ ಫಲಾನುಭವಿಗಳಿಗೆ ಇದೊಂದು ವರವಾಗಲಿದೆ. ಆದರೆ ಮತ್ತೊಂದೆಡೆ BPL ರೇಷನ್ ಕಾರ್ಡ್ ಹೊಂದಿರುವವರು ರೇಷನ್ ಪಡೆಯದ ಫಲಾನುಭಿಗಳಿಗೆ ಶಾಪವಾಗಲಿದೆ.
BPL Ration Card Karnataka Cancellation
ಅದು ಹೇಗೆ ಅಂತಿರಾ..? ಕಳೆದ ಆರು ತಿಂಗಳುಗಳಿಂದ ರೇಷನ್ ಪಡೆದವರ BPL ಕಾರ್ಡ್ ಗಳನ್ನು ರದ್ದು ಮಾಡಲು ಸರ್ಕಾರ ಮುಂದಾಗಿದ್ದು, ಈ ಕುರಿತು ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆಸಲಾಗುತ್ತಿದೆ.
ರಾಜ್ಯದಲ್ಲಿ ಆರು ತಿಂಗಳಿಂದ ರೇಷನ್ ಪಡೆಯದ ಒಟ್ಟು 3.26 ಲಕ್ಷ BPL ಕಾರ್ಡುದಾರರಿದ್ದಾರೆ. ಇಂತಹ ಕಾರ್ಡುಗಳನ್ನು ರದ್ದು ಮಾಡಲು ಆಹಾರ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.
ಸರ್ಕಾರ ನೀಡುವ ಸೌಲಭ್ಯಗಳನ್ನು ಬಡವರು ಪಡೆಯಬೇಕು. ಆದರ ಕಾರಣಾಂತರಗಳಿಂದ ರೇಷನ್ ಪಡೆಯಲು ಸಾಧ್ಯವಾಗುವುದಿಲ್ಲ. ದಯವಿಟ್ಟು ಪಡಿತರ ಚೀಟಿ ಇರುವವರು ಪ್ರತಿ ತಿಂಗಳು ರೇಷನ್ ಪಡೆಯಿರಿ. ರೇಷನ್ ಕಾರ್ಡ್ ರದ್ದಾಗುವ ಅವಕಾಶ ನೀಡಬೇಡಿ.
BPL ರೇಷನ್ ಕಾರ್ಡ್ ರದ್ದಾದರೆ ಗೃಹಲಕ್ಷ್ಮಿ ಯೋಜನೆಯ 2,000 ರೂ. ಕೂಡ ಬರುವುದಿಲ್ಲ. ಆದ್ದರಿಂದ ಫಲಾನುಭವಿಗಳು ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆಯಿರಿ.
ಇತರೆ ಮಾಹಿತಿಗಳನ್ನು ಓದಿ
ಗೃಹಲಕ್ಷ್ಮೀ ಯೋಜನೆಯ 4ನೇ ಕಂತಿನ ಹಣ ಜಮಾ