ಎಲ್ಲರಿಗೂ ನಮಸ್ಕಾರ, ನೀವು ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ (Free Coaching Karnataka 2023) ನೀಡಲು ಸರ್ಕಾರದಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಸರ್ಕಾರದ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.
UPSC, KAS, BANKING, GROUP- C, RRB, SSC, JUDICIARY Services ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ವಸತಿಯುತ ಸಂಯೋಜಿತ ಪದವಿಯೊಂದಿಗೆ UPSC/KAS ತರಬೇತಿಗೆ ನಿಯೋಜಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Free Coaching Merit List 2024 Download
Free Coaching Karnataka 2023 ವಿವರ:
ಪರೀಕ್ಷೆ ಹೆಸರು | Free Coaching 2023 |
ತರಬೇತಿ ವಿವರ | UPSC, KAS, BANKING, GROUP- C, RRB, SSC, JUDICIARY Services |
ವಯಸ್ಸು | 18 ರಿಂದ 40 ವರ್ಷ |
ಕೊನೆಯ ದಿನಾಂಕ | 29-11-2023 |
2023-24ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಪರೀಕ್ಷಾ ಪೂರ್ವಭಾವಿ ತರಬೇತಿಗಾಗಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿದೆ.
ತರಬೇತಿ ಅವಧಿ:
- UPSC ತರಬೇತಿ: ಪ್ರಿಲಿಮ್ಸ್ ಪರೀಕ್ಷೆಗೆ 6 ತಿಂಗಳ ಹಾಗೂ Mains ಪರೀಕ್ಷೆಗೆ 3 ತಿಂಗಳ ತರಬೇತಿ ನೀಡುತ್ತಾರೆ. (ಪ್ರಿಲಿಮ್ಸ್ ಪಾಸಾದವರು Mains ಉಚಿತ ತರಬೇತಿಗೆ ಅರ್ಹರಾಗಿರುತ್ತಾರೆ.).
- KAS ತರಬೇತಿ: ಕೆಎಎಸ್ ಕೋರ್ಸ್‌ಗೆ 7 ತಿಂಗಳ ಪೂರ್ವಭಾವಿ ತರಬೇತಿ ನೀಡಲಾಗುತ್ತದೆ.
- ಬ್ಯಾಂಕಿಂಗ್/ಗ್ರೂಪ್ -ಸಿ/ ಎಸ್.ಎಸ್.ಸಿ ಮತ್ತು ಆರ್.ಆರ್.ಬಿ/ನ್ಯಾಯಾಂಗ ಸೇವೆ ಪರೀಕ್ಷೆಗಳಿಗೆ – 3 ತಿಂಗಳ ತರಬೇತಿ ಇರುತ್ತದೆ.
ಅರ್ಹತೆಗಳು:
ಶೈಕ್ಷಣಿಕ ಅರ್ಹತೆ: ಈ ತರಬೇತಿಗಳಿಗೆ ಪದವಿ ಉತ್ತೀರ್ಣರಾದವರು ಮತ್ತು ಪದವಿ ಅಂತಿಮ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆ ಹಂತದಲ್ಲಿ ಪದವಿ ವ್ಯಾಸಂಗ ಪೂರ್ಣಗೊಳಿಸಿರುವ ಬಗ್ಗೆ ಅಧಿಕೃತ ದಾಖಲೆಗಳನ್ನು ನೀಡಬೇಕು.
ಅಭ್ಯರ್ಥಿಯ ಸಾಮಾನ್ಯ ಅರ್ಹತೆಗಳು:
- ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗಧಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.
- ದೈಹಿಕ ಅಂಗವಿಕಲ ಮೀಸಲಾತಿಯಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿ, ನಿಗಧಿತ ಪ್ರಾಧಿಕಾರದಿಂದ ನಿಗಧಿಪಡಿಸಲಾದ ಕೊನೆಯ ದಿನಾಂಕದೊಳಗೆ ಅಂಗವಿಕಲ ಪುಮಾಣ ಪತ್ರ ಪಡೆದಿರಬೇಕು.
- ವಿದ್ಯಾರ್ಥಿನಿಲಯ / ಕ್ರೈಸ್ ವಿದ್ಯಾರ್ಥಿನಿಲಯ / ಸಫಾಯಿ ಕರ್ಮಚಾರಿ ಮೀಸಲಾತಿ ಅಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿ ನಿಗಧಿತ ನಮೂನೆಯಲ್ಲಿ ಪ್ರಮಾಣ ಪತ್ರ ಪಡೆದಿರಬೇಕು.
ವಾರ್ಷಿಕ ಆದಾಯ: ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ. 5 ಲಕ್ಷ ಮೀರಿರಬಾರದು.
ಆಯ್ಕೆ ವಿಧಾನ:
- ಅಭ್ಯರ್ಥಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದ ಮೂಲಕ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
- ಅಂಕಗಳ ಮೆರಿಟ್ ಆಧಾರದ ಮೇಲೆ ಆನ್-ಲೈನ್ ಕೌನ್ಸಿಲಿಂಗ್ ಮೂಲಕ ಅಭ್ಯರ್ಥಿಗಳನ್ನು ತರಬೇತಿ ಸಂಸ್ಥೆಗೆ ನಿಯೋಜಿಸಲಾಗುತ್ತದೆ.
ಶಿಷ್ಯವೇತನ (ಮಾಸಿಕ):
- UPSC ತರಬೇತಿ: 1) ದೆಹಲಿ-10,000 ರೂ., 2) ಹೈದರಾಬಾದ್-8,000 ರೂ., 3) ಬೆಂಗಳೂರು-5,000 ರೂ.
- KAS ತರಬೇತಿ: 5,000 ರೂ.
- ಬ್ಯಾಂಕಿಂಗ್/ಗ್ರೂಪ್ -ಸಿ/ ಎಸ್.ಎಸ್.ಸಿ ಮತ್ತು ಆರ್.ಆರ್.ಬಿ/ನ್ಯಾಯಾಂಗ ಸೇವೆ ಪರೀಕ್ಷೆಗಳಿಗೆ: 5,000 ರೂ.
ಅಗತ್ಯ ದಾಖಲೆಗಳು:
- ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ
- ಆಧಾರ ಕಾರ್ಡ್
- SSLC ಮಾರ್ಕ್ಸ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಪದವಿ ಅಂಕಪಟ್ಟಿ
- ಬ್ಯಾಂಕ್ ಖಾತೆ ವಿವರ
www.sw.kar.nic.in 2023 free coaching ಪ್ರಮುಖ ದಿನಾಂಕಗಳು:
ಪ್ರಕಟಣೆ ಹೊರಡಿಸಿದ ದಿನಾಂಕ: 02-11-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 29-11-2023
SC ST Free Coaching Karnataka 2023 Application Link:
ಪ್ರಕಟಣೆ: ಡೌನ್’ಲೋಡ್
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: sw.kar.nic.in, https://swdservices.karnataka.gov.in/petccoaching/
ಅರ್ಜಿ ಸಲ್ಲಿಸುವ ಮೊದಲು ಇಲಾಖೆಯ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಇತರೆ ಮಾಹಿತಿಗಳನ್ನು ಓದಿ