ನಮಸ್ಕಾರ, ನೀವು ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಿದ್ದೀರಾ? ನಿಮ್ಮ ಅರ್ಜಿ ನೋಂದಣಿ ಆಗಿದೆಯಾ ಅಥವಾ ಇಲ್ಲ ಎಂಬುದನ್ನು ತಿಳಿಯಬೇಕಾ? ಚಿಂತೆ ಬಿಡಿ ನಿಮಗಾಗಿ Gruha Lakshmi Status 2023 ಚೆಕ್ ಮಾಡುವ ಸರಳ ವಿಧಾನವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಈ ಲೇಖನವನ್ನು ಓದಿ ಹಾಗೂ ನಿಮ್ಮ ಗೃಹ ಲಕ್ಷ್ಮಿ ಅರ್ಜಿ ನೋಂದಣಿ Status ಮಾಹಿತಿ ಪಡೆಯಿರಿ.
ನೀವು ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದರೆ, ಅರ್ಜಿ ಸ್ಥಿತಿ ತಿಳಿಯುವುದು ಬಹುಮುಖ್ಯವಾಗಿರುತ್ತದೆ. ಅರ್ಜಿ ಸಲ್ಲಿಸಿದ್ದೇವೆ ಎಂದು ನೀವು ಸುಮ್ಮನಿರಬಹುದು ಆದರೆ ಕೇಲವೊಮ್ಮೆ ತಾಂತ್ರಿಕ ದೋಷದಿಂದ ಅರ್ಜಿ ಸ್ವೀಕೃತವಾಗಿರುವುದಿಲ್ಲ. ಆದ್ದರಿಂದ ಈ ಕೇಳಗೆ ವಿವರಿಸಿದ ಸರಳ ವಿಧಾನದ ಮೂಲಕ ನೀವು ಗೃಹ ಲಕ್ಷ್ಮಿ ಅರ್ಜಿ ಸ್ಥಿತಿ (Gruha Lakshmi Status Check) ಯನ್ನು ತಿಳಿಯಿರಿ.
How To Check Gruha Lakshmi Application Status?
- ನಿಮ್ಮ ಮೊಬೈಲ್ ನಿಂದ ಈ 8147500500 ನಂಬರ್‌ಗೆ ನಿಮ್ಮ 12 ಅಂಕಿಯ ರೇಷನ್ ಕಾರ್ಡ್ ಸಂಖ್ಯೆಯನ್ನು SMS ಕಳುಹಿಸಿ. (ಈ ಕೇಳಗಿನಂತೆ ನಿಮ್ಮ ಪಡಿತರ ಚೀಟಿ ನಂಬರ್ SMS ಮಾಡಿ.)

- ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕೃತವಾಗಿದ್ದರೆ ಹೀಗೆ “ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆ GL002S23XXXXXXX ಯಶಸ್ವಿಯಾಗಿ ಸಲ್ಲಿಸಲಾಗಿದೆ. -ಕರ್ನಾಟಕ ಸರ್ಕಾರ” ಎಂದು ನಿಮಗೆ ಮಸೇಜ್ ಬರುತ್ತದೆ.

- ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕೃತವಾಗಿಲ್ಲದಿದ್ದಲ್ಲಿ ಹೀಗೆ “ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಬಾಕಿಯಿದೆ, ದಯವಿಟ್ಟು ಹತ್ತಿರದ ಬೆಂಗಳೂರು ಒನ್/ ಕರ್ನಾಟಕ ಒನ್ ಗ್ರಾಮ ಒನ್ /ಬಾಪೂಜಿ ಸೇವಾ ಕೇಂದ್ರ ಗೆ ಭೇಟಿ ನೀಡಿ.” ಎಂದು ಮೆಸೇಜ್ ಬರುತ್ತದೆ. ಹೀಗೆ ಬಂದರೆ ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಕೊನೆಯ ಮಾತು: ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ (Gruha Lakshmi Application Status) ಚೆಕ್ ಮಾಡುವ ಮಾಹಿತಿ ಸಹಾಯವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್ ಗ್ರೂಪ್‌ಗೆ ಅಥವಾ ಟೆಲಿಗ್ರಾಮ್ ಗ್ರೂಪ್‌ಗೆ ಸೇರಬಹುದು. ಧನ್ಯವಾದಗಳು.
ಈ ಸುದ್ದಿಗಳನ್ನು ಓದಿ:
ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೆ ಬಂದಿಲ್ಲವೇ
ಗೃಹ ಲಕ್ಷ್ಮಿ : ₹2 ಸಾವಿರ ಜಮಾ ಆಗಿರುವ, SMS ಬಂತಾ?
ಮೊಬೈಲ್‌ನಲ್ಲೇ ರೇಷನ್ ಕಾರ್ಡ್ Status ಚೆಕ್ ಮಾಡಿ