ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಶ ಯೋಜನೆಗಳಲ್ಲಿ ಒಂದಾದ “ಗೃಹ ಜ್ಯೋತಿ” ಯೋಜನೆ (Gruha Jyoti Scheme Application) ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್‘ನಲ್ಲಿ ಹೇಗೆ ಸಲ್ಲಿಸುವುದು, ಅದಕ್ಕೆ ಬೇಕಾಗುವ ದಾಖಲೆಗಳು ಮತ್ತು ಷರತ್ತುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
“ಗೃಹ ಜ್ಯೋತಿ” (Gruha Jyothi Scheme) ಯೋಜನೆಯ ಅಡಿಯಲ್ಲಿ ರಾಜ್ಯದ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್ʼಗಳವರೆಗಿನ ಗೃಹ ಬಳಕೆಯ ವಿದ್ಯುತ್ ಉಚಿತ ನೀಡುವ ಯೋಜನೆ ಇದಾಗಿದೆ.
![](https://kannadasiri.in/wp-content/uploads/2023/06/Gruha-Jyothi-Scheme-Online-Application-2023-Apply-@-sevasindhugs.karnataka.gov_.in_-1024x411.webp)
ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23 ರ ಬಳಕೆಯ ಆಧಾರದನ್ವಯ) ಯೂನಿಟ್ ಗಳ ಮೇಲೆ ಶೇಕಡ 10 ರಷ್ಟು ಹೆಚ್ಚುವರಿ ಬಳಕೆಯ ವಿದುತ್ನ್ನು ಉಚಿತ ನೀಡಲಾಗುತ್ತದೆ.
“ಗೃಹ ಜ್ಯೋತಿ” (Gruha Jyoti Scheme) ಷರತ್ತುಗಳು
- “ಗೃಹ ಜ್ಯೋತಿ” (Gruha Jyothi Scheme) ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ; ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ.
- ಪ್ರತಿ ತಿಂಗಳ ಮೀಟರ್ ರೀಡಿಂಗ್ ಮಾಡಿದಾಗ ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ಲನ್ನು ನಮೂದಿಸಲಾಗುವುದು.
- ಅರ್ಹ ಯೂನಿಟ್/ಮೊತ್ತಕ್ಕಿಂತ ಒಳಗೆ ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ಲನ್ನು ನೀಡಲಾಗುವುದು.
- ಗೃಹ ವಿದ್ಯುತ್ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್ ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ net bill ನೀಡುವುದು ಹಾಗೂ ಗ್ರಾಹಕರು Net Bill ನ್ನು ಪಾವತಿಸಬೇಕು.
- ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ / ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡಿಸಲಾಗುವುದು.
- ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಮಿಟರ್ ಗಳಿದ್ದಲ್ಲಿ, ಒಂದು ಮಿಟರ್ ಗೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರಾಗುವರು.
- ಈ ಯೋಜನೆಯ ಅಡಿಯಲ್ಲಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ (sevasindhugs.karnataka.gov.in) ಮೂಲಕ ಅರ್ಜಿ ಸಲ್ಲಿಸಬೇಕು.
- ಪ್ರತಿ ಫಲಾನುಭವಿಯು ತನ್ನ Connection ID / Account ID ಅನ್ನು ಆಧಾರ್ ಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು. (Link Aadhaar To Electricity Bill Karnataka)
“ಗೃಹ ಜ್ಯೋತಿ” (Gruha Jyoti Scheme) ಯೋಜನೆಯ ಸೇವಾ ಸಿಂಧು ಅರ್ಜಿ ಸಲ್ಲಿಸುವುದು ಹೇಗೆ?
- “ಗೃಹ ಜ್ಯೋತಿ” ಯೋಜನೆ ಅಡಿಯಲ್ಲಿ ಉಚಿತ ಸೌಲಭ್ಯ ಪಡೆಯಲು ಇಚ್ಛೆಯಿರುವ ಗ್ರಾಹಕರು ಕೇಳಗೆ ನೀಡಿರುವ ಸೇವಾ ಸಿಂಧು ಪೋರ್ಟಲ್ ಅಧಿಕೃತ ಲಿಂಕ್ (sevasindhugs.karnataka.gov.in gruha jyothi) ಮೇಲೆ ಕ್ಲಿಕ್ ಮಾಡಿ.
- ಅಲ್ಲಿ “ಗೃಹ ಜ್ಯೋತಿ” ಎಂದು ನಮೂದಿಸಲಾಗಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
- ಮುಂದಿನ ಲಿಂಕ್ನಲ್ಲಿ “ಗೃಹ ಜ್ಯೋತಿ” Gruha Jyoti Scheme ಆನ್ಲೈನ್ ಅರ್ಜಿ ಸಿಗುತ್ತದೆ.
- ನಂತರ ಅಲ್ಲಿ ಎಸ್ಕಾಂ ಹೆಸರು, Account ID/Connection ID ಟೈಪಿಸಿ ನಿಮ್ಮ ಹೆಸರು, ವಿಳಾಸ ಅಲ್ಲಿ ತಂತಾನೆ ಭರ್ತಿಯಾಗುತ್ತದೆ.
- ಆದಾದ ನಂತರ ನೀವು ಮಾಲಿಕರ ಅಥವಾ ಬಾಡಿಗೆದಾರರ, ಅಥವಾ ಕುಟುಂಬದ ಸದಸ್ಯರ ಎನ್ನುವುದನ್ನು ನಮೂದಿಸಬೇಕು, ನಿಮ್ಮ ಆಧಾರ ಸಂಖ್ಯೆ, ಆಧಾರ ಕಾರ್ಡ್’ಯನ್ನು ಟೈಪಿಸಿ ಆಧಾರ ನಲ್ಲಿ ಇರುವಂತೆ ಹೆಸರು ಬರುತ್ತದೆ. ಮೊಬೈಲ್ ನಂಬರ್ʼನ್ನು ಅಲ್ಲಿ ಭರ್ತಿ ಮಾಡಬೇಕು.
- ನಿಮ್ಮ ನಂಬರ್ ಗೆ ಒಂದು OTP ಬರುತ್ತದೆ. ಓಟಿಪಿ ಎಂಟರ್ ಮಾಡಿ Validate ಮೇಲೆ ಕ್ಲಿಕ್ ಮಾಡಿ
- I Agree ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.
- ಕಡೆಯದಾಗಿ Word verification ಅಂತ ಇರುವಲ್ಲಿ ಅಲ್ಲಿ ಕಾಣುವ ನಂಬರ್ʼನ್ನು ಕೇಳಗೆ ನೀಡಿರುವ ಬಾಕ್ಸʼನಲ್ಲಿ ತುಂಬಬೇಕು. ನಂತರ Submit ಮೇಲೆ ಕ್ಲಿಕ್ ಮಾಡಿ.
- ಮುಂದಿನ ಪೇಜ್ ನಲ್ಲಿ ನೀವು ಭರ್ತಿ ಮಾಡಿರುವ ಮಾಹಿತಿ ಅಲ್ಲಿ ತೋರಿಸುತ್ತದೆ. ಅದನ್ನು ಪರಿಶೀಲಿಸಿ ಎಲ್ಲವೂ ಸರಿಯಾಗಿದೆವೋ ಇಲ್ಲವೊ ನೋಡಿ Submit ಬಟನ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಅರ್ಜಿ Submit ಆದ ನಂತರ ಸ್ವೀಕೃತಿ PDF ಲಭ್ಯವಾಗುತ್ತದೆ ಅದನ್ನು ಡೌನ್’ಲೋಡ್ ಮಾಡಿಕೊಳ್ಳಿ.
- ಇಲ್ಲಿಗೆ ನಿಮ್ಮ ಅರ್ಜಿ ಸಲ್ಲಿಕೆ ಪ್ರಕ್ರೀಯೆ ಮುಗಿಯುತ್ತದೆ.
![Gruha Jyoti Scheme Online Application 2023 @ sevasindhu.karnataka.gov.in](https://kannadasiri.in/wp-content/uploads/2023/06/Gruha-Jyoti-Scheme-Online-Application-2023-@-sevasindhu.karnataka.gov_.in_-675x1024.webp)
Gruha Jyothi Yojana Karnataka Apply Online
“ಗೃಹ ಜ್ಯೋತಿ” (Gruha Jyothi Scheme Link) ಯೋಜನೆ ವೆಬ್ಸೈಟ್ ಲಿಂಕ್ 1: ಇಲ್ಲಿ ಕ್ಲಿಕ್ ಮಾಡಿ
Seva Sindhu Gruha Jyothi ವೆಬ್ಸೈಟ್ ಲಿಂಕ್ 2: ಇಲ್ಲಿ ಕ್ಲಿಕ್ ಮಾಡಿ
Griha Jyoti New Link 3: Apply Gruha Jyothi
ಸೇವಾ ಸಿಂಧು ಪೋರ್ಟಲ್ ಲಿಂಕ್ 4: sevasindhu.karnataka.gov.in
Gruha Jyoti ಲಿಂಕ್ 6: https://sevasindhugs1.karnataka.gov.in/
Gruha Jyothi Scheme Application Link 6: https://sevasindhugs.karnataka.gov.in/gruhajyothi
ಕೊನೆಯ ಮಾತುಗಳು: ಗೆಳೆಯರೆ “ಗೃಹ ಜ್ಯೋತಿ” ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ನಿಮಗೆ ಸಿಕ್ಕಿದೆ ಎಂದು ಭಾವಿಸುತ್ತೇನೆ. ನೀವು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿ (Seva Sindhu Gruha Jyothi Registration) ಸಲ್ಲಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿರಿ. ಇದೆ ರೀತಿ ಸುದ್ದಿಗಳನ್ನು ಓದಲು ನಮ್ಮ ವಾಟ್’ಆ್ಯಪ್ ಗ್ರುಪ್ ಜಾಯಿನ್ ಆಗಿರಿ ಮತ್ತು ಕಮೆಂಟ್ ಬ್ಯಾಕ್ಸ್’ನಲ್ಲಿ ನಿಮ್ಮ ಅನಿಸಿ ಕೆ ಹಂಚಿಕೊಳ್ಳಿ.
ಸರ್ಕಾರ ಇತರೆ ಯೋಜನೆಗಳು
ಗೃಹ ಲಕ್ಷ್ಮೀ” ಸೇವಾ ಸಿಂಧು ಆನ್ಲೈನ್ ಅರ್ಜಿ
Gruha Jyoti Scheme ಪ್ರಮುಖ ಪ್ರಶ್ನೆಗಳು
Gruha Jyoti Scheme ಅಧಿಕೃತ ವೆಬ್ಸೈಟ್ ಯಾವುದು?
ಕಾರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್ ಮೂಲಕ ತಾವುಗಳು ಆನ್ಲೈನ್ ಅರ್ಜಿ ಸಲ್ಲಿಸಬಹುದು. ಲಿಂಕ್: sevasindhu.karnataka.gov.in ಅಥವಾ https://sevasindhugs.karnataka.gov.in/
How to apply for Gruha Jyothi Scheme online in Seva Sindhu?
“ಗೃಹ ಜ್ಯೋತಿ” ಯೋಜನೆ ಅಡಿಯಲ್ಲಿ ಉಚಿತ ಸೌಲಭ್ಯ ಪಡೆಯಲು ಇಚ್ಛೆಯಿರುವ ಗ್ರಾಹಕರು ಕೇಳಗೆ ನೀಡಿರುವ ಸೇವಾ ಸಿಂಧು ಪೋರ್ಟಲ್ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ. ಪ್ರತಿ ಫಲಾನುಭವಿಯು ತನ್ನ Connection ID / Account ID ಅನ್ನು ಆಧಾರ್ ಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು.
![Gruha Jyoti Scheme 2023](https://kannadasiri.in/wp-content/uploads/2023/06/Gruha-jyoti-scheme-online-application-Received-2.webp)
Hi