ನಿಮ್ಮ ರೇಷನ್ ಕಾರ್ಡ್‌ನಲ್ಲಿನ ಮುಖ್ಯಸ್ಥರನ್ನು ಬದಲಾಯಿಸಬೇಕೇ? ನಿಮ್ಮ ಕಾರ್ಡ್‌ನಲ್ಲಿ ಪುರುಷ ಮುಖ್ಯಸ್ಥ ಇರುವುದರಿಂದ ನಿಮಗೆ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲವೇ? ಹಾಗಿದ್ದರೆ ಇಲ್ಲಿದೆ ನಿಮಗೆ ಸಿಹಿ ಸುದ್ದಿ. ಈ ಲೇಖನದಲ್ಲಿ Ration Card Family Head ಹೇಗೆ ಬದಲಾವಣೆ ಮಾಡುವುದು ಎಂಬುದನ್ನು ತಿಳಿಸಲಾಗಿದೆ, ಓದಿ ಪ್ರಯೋಜನ ಪಡೆದುಕೊಳ್ಳಿ.
BPL, APL ರೇಷನ್ ಕಾರ್ಡ್‌ನಲ್ಲಿ ಗುರುತಿಸಿಕೊಂಡಿರುವ ಮನೆ ಯಜಮಾನರು ಮರಣ ಹೊಂದಿದ್ದಲ್ಲಿ ಅಥವಾ ಕುಟುಂಬದ ಮುಖ್ಯಸ್ಥರು ಪುರುಷ ರಾಗಿದ್ದಲ್ಲಿ ಅನೇಕ ಕುಟುಂಬಗಳು ಗೃಹಲಕ್ಷ್ಮೀ ಯೋಜನೆ ನೋಂದಣಿ ಮಾಡಿಕೊಳ್ಳಲು ಕಷ್ಟಪಡುತ್ತಿರುವುದನ್ನು ಕಂಡು ಸರ್ಕಾರ ಮುಖ್ಯಸ್ಥರ ಬದಲಾವಣೆಗೆ ಅವಕಾಶ ನೀಡಿದೆ. ಹಲವು ಸರ್ಕಾರಿ ಯೋಜನೆಗಳಿಂದ ಜನರು ವಂಚಿತರಾಗುತ್ತಿರುವುದು ಈ ಬದಲಾವಣೆಗೆ ಕಾರಣವಾಗಿದೆ.
ಯಾವ ರೀತಿಯ ಬದಲಾವಣೆ ಸಾಧ್ಯ?
ನಿಮ್ಮ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರು ನಿಧನರಾಗಿದ್ದರೆ ಅವರ ಹೆಸರನ್ನು ರೇಷನ್ ಕಾರ್ಡ್‌ನಿಂದ ತೆಗೆದು ಇತರೆ ಸದಸ್ಯರಲ್ಲಿ ಒಬ್ಬರನ್ನು (ಹಿರಿಯ ಮಹಿಳೆಯನ್ನು) ಇ-ಕೆವೈಸಿ ಮೂಲಕ ಮುಖ್ಯಸ್ಥರನ್ನಾಗಿ ಮಾಡಬಹುದು. ಹಾಗೂ ನಿಮ್ಮ ರೇಷನ್ ಕಾರ್ಡ್‌ನಲ್ಲಿ ಪುರುಷ ಮುಖ್ಯಸ್ಥರಾಗಿದ್ದರೆ ಅಗತ್ಯ ದಾಖಲೆಗಳನ್ನು ನೀಡಿ ಮಹಿಳಾ ಮುಖ್ಯಸ್ಥರನ್ನು ಆಯ್ಕೆ ಮಾಡಬಹುದು. ಈ ಪ್ರಕ್ರೀಯೆಗೆ ಅಗತ್ಯ ದಾಖಲೆಗಳನ್ನು ಹಾಗೂ ಅರ್ಜಿ ನಮೂನೆ ಅವಶ್ಯ.
How To Change Ration Card Family Head?
ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ (Ration Card Family Head) ನ್ನು ಬದಲಾವಣೆ ಮಾಡಲು ನೀವು ರೇಷನ್ ಪಡೆಯುವ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಅಗತ್ಯ ದಾಖಲೆ ಅರ್ಜಿ ನಮೂನೆ ಭರ್ತಿ ಮಾಡಿ Ration Card eKYC ಮಾಡಿಸಲು ಅವಕಾಶ ನೀಡಲಾಗಿದೆ. ಪುರುಷರು ಕುಟುಂಬದ ಮುಖ್ಯಸ್ಥರಾಗಿದ್ದಲ್ಲಿ ಅಂತಹ ಕುಟುಂಬದ ಮುಖ್ಯಸ್ಥರನ್ನಾಗಿ ಮಹಿಳೆಯನ್ನು ಆಯ್ಕೆ ಮಾಡಲು ಅವಕಾಶ ಲಭ್ಯವಿರುತ್ತದೆ. ಪಡಿತರ ಚೀಟಿದಾರರು ನಿಮ್ಮ ವ್ಯಾಪ್ತಿಯ ರೇಷನ್ ಅಂಗಡಿಯನ್ನು ಸಂಪರ್ಕಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಸರ್ಕಾರಿ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್ ಗ್ರೂಪ್‌ಗೆ ಅಥವಾ ಟೆಲಿಗ್ರಾಮ್ ಗ್ರೂಪ್‌ಗೆ ಸೇರಬಹುದು. ಹಾಗೂ ಕನ್ನಡಸಿರಿ.in ಗೆ ಭೇಟಿ ನೀಡಿ ಹೊಸ ಹೊಸ ಮಾಹಿತಿಯನ್ನು ಪಡೆಯಬಹುದು.
ಈ ವಿಷಯ ಗೊತ್ತಿರಲಿ..
ನ್ಯಾಯಬೆಲೆ ಅಂಗಡಿಗಳಲ್ಲಿ ಹೆಸರುಗಳ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶವಿರುವುದಿಲ್ಲ. ಹೊಸ ಪಡಿತರ ಚೀಟಿ ಮತ್ತು ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಮಾಡುವ ಪ್ರಕ್ರೀಯೆಯನ್ನು ಪ್ರಸ್ತುತ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.
ಕೊನೆಯ ಮಾತು: ರೇಷನ್ ಕಾರ್ಡ್‌ನಲ್ಲಿ ಗುರುತಿಸಿಕೊಂಡಿರುವ ಮುಖ್ಯಸ್ಥರನ್ನು ಬದಲಾವಣೆ ಮಾಡುವ (Ration Card Family Head) ಮಾಹಿತಿ ಸಹಾಯವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್ ಗ್ರೂಪ್‌ಗೆ ಅಥವಾ ಟೆಲಿಗ್ರಾಮ್ ಗ್ರೂಪ್‌ಗೆ ಸೇರಬಹುದು. ಧನ್ಯವಾದಗಳು.
✅ರೇಷನ್ ಕಾರ್ಡ್ ತಿದ್ದುಪಡಿ, ಸದಸ್ಯರ ಸೇರ್ಪಡೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್
“ಗೃಹ ಲಕ್ಷ್ಮೀ” ಯೋಜನೆ 2023 ಅರ್ಜಿ