ಎಲ್ಲರಿಗೂ ನಮಸ್ಕಾರ, ನೀವು ಕೂಡ HSRP Number Plate ಅಳವಡಿಸಿಲ್ಲವೇ…? ಇನ್ನೂ ಇದೆ ಕಾಲಾವಕಾಶ. ಹಾಗಿದ್ದರೇ ಈ ಲೇಖನವನ್ನು ಓದಿ. ಹೆಚ್‌ಎಸ್‌ಆರ್ ನಂಬರ್ ಪ್ಲೇಟ್ ಅಳವಡಿಕೆ ಬಗ್ಗೆ ಮಾಹಿತಿ ಪಡೆಯಿರಿ.
ಹೌದು.. ವಾಹನಗಳ ಸುರಕ್ಷತೆ ದೃಷ್ಟಿಯಿಂದ ಸಾರಿಗೆ ಇಲಾಖೆಯು ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ಅಳವಡಿಕೆ ಮಾಡಲು ಸೂಚಿಸಲಾಗಿದೆ.
HSRP Number Plate Karnataka Last Date:
ಇದೇ ಮೇ 31 ರವರೆಗೆ ಅವಕಾಶ ನೀಡಲಾಗಿದೆ. ಜೂ. 1 ರಿಂದ HSRP ಪ್ಲೇಟ್ ಅಳವಡಿಕೆ ಮಾಡದ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ತಯಾರಿ ನಡೆಸುತ್ತಿದೆ. ನಿಮ್ಮಲ್ಲಿರುವ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ನಾಲ್ಕು ಚಕ್ರ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಮಾದರಿಯ ನಂಬರ್ ಪ್ಲೇಟ್ ಅನ್ನು ಮಾಡಿಸುವುದು ಕಡ್ಡಾಯವಾಗಿದೆ.
ಮೂರು ವರ್ಷದ ಹಿಂದೆಯೇ ಈ ಬಗ್ಗೆ ಆದೇಶವನ್ನು ಜಾರಿ ಮಾಡಿದ್ದರೂ, ಆದರೆ ಕಳೆದ ಒಂದು ವರ್ಷದಲ್ಲಿ ಹೆಚ್‌ಎಸ್‌ಆರ್ ನಂಬರ್ ಪ್ಲೇಟ್ ನೋಂದಣಿ ಮಾಡಿಕೊಳ್ಳುವ ಪ್ರಮಾಣ ಹೆಚ್ಚಿಗೆ ಆಗಿದೆ. ಆದರೂ ಕೂಡ ನಿರೀಕ್ಷಿಸಿದಷ್ಟು ನೋಂದಣಿ ಮಾಡಿಕೊಂಡಿಲ್ಲ. ಅದಕ್ಕಾ ಮೇ 31 ರ ನಂತರ ದಂಡ ವಿಧಿಸಲು ಸಾರಿಗೆ ಇಲಾಖೆ ಮುಂದಾಗಲಿದೆ..
ದಂಡ ಎಷ್ಟು?:
ಜೂನ್ 1ರ ನಂತರ ಹೆಚ್‌ಎಸ್‌ಆರ್ ನಂಬರ್ ಪ್ಲೇಟ್ ಅಳವಡಿಸದ ವಾಹನಗಳಿಗೆ ಮೊದಲ ಬಾರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ಆನಂತರ ಪ್ರತಿ ಬಾರಿಯೂ 1 ಸಾವಿರ ರೂ. ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಕೇಂದ್ರ ಸಾರಿಗೆ ಇಲಾಖೆಯ ಆದೇಶದಂತೆ ಏ. 1 ಕ್ಕೂ ಮೊದಲು ಖರೀದಿಸಿದ ಹಾಗೂ ನೋಂದಣಿಯಾಗಿರುವ ವಾಹನಗಳು 2 ಕೋಟಿಯಷ್ಟಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಅವಕಾಶ ನೀಡಲಾಗಿತ್ತು.
ನಂಬರ್ ಪ್ಲೇಟ್‌ಗಳು ವಾಹನಗಳ ಭದ್ರತೆ ಉದ್ದೇಶದಿಂದ ಅಳವಡಿಸಲು ಆದೇಶಿಸಲಾಗಿದೆ. ಪ್ಲೇಟ್‌ನಲ್ಲಿ ಅಶೋಕಚಕ್ರದ ಮುದ್ರೆಯೂ ಇದೆ. ಪ್ಲೇಟ್‌ನ ಕೆಳಗೆ 10 ನಂಬರಿನ ವಿಶಿಷ್ಟ ಗುರುತು ಇದೆ. ಒಮ್ಮೆ ಈ ಪ್ಲೇಟ್ ಅಳವಡಿಸಿದರೆ ಅದನ್ನು ಬಿಚ್ಚಲು ಸಾಧ್ಯವಾಗುವುದಿಲ್ಲ. ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಈ ನಂಬರ್‌ಪ್ಲೇಟ್ ಸಹಕಾರಿಯಾಗಲಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
HSRP Number Plate Online Apply:
ಸಾರಿಗೆ ಇಲಾಖೆಯ ಅದೇಶದಂತೆ http://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಇತರೆ ಮಾಹಿತಿಗಳನ್ನು ಓದಿ
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ಗುಡ್ ನ್ಯೂಸ್