ಎಲ್ಲರಿಗೂ ನಮಸ್ಕಾರ, ನೀವು ಕೂಡ ಹೊಸ ರೇಷನ್ ಕಾರ್ಡ್ (New Ration Card) ಗಾಗಿ ಕಾಯುತ್ತಿದ್ದೀರಾ..? ಹಾಗಿದ್ದರೇ ನಿಮಗಿದೆ ಗುಡ್ ನ್ಯೂಸ್. ಲೋಕಸಭೆ ಚುನಾವಣೆಯ ಕಾರಣದಿಂದಾಗಿ ಹೊಸ ಪಡಿತರ ಚೀಟಿ ವಿತರಣೆ ಪ್ರಕ್ರೀಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಕರ್ನಾಟಕದಲ್ಲಿ ಹೊಸ BPL Ration Card ಮತ್ತು APL Ration Card ಅರ್ಜಿ ಸಲ್ಲಿಸಲು ಬಯಸುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಬಹುದಾಗಿರುತ್ತದೆ. ಕರ್ನಾಟಕದಲ್ಲಿ Ration List ನಲ್ಲಿ ಹೆಸರು ಇಲ್ಲದವರು ಅಗತ್ಯ ದಾಖಲೆಗಳನ್ನು ಹೊಂದಿಸಿಟ್ಟುಕೊಳ್ಳುವುದು ಒಳಿತು.
ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತವೆ ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
New Ration Card Documents:
- ವಾಸಸ್ಥಳದ ಪುರಾವೆಗಳು (ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಇತ್ಯಾದಿ [ಸ್ಕ್ಯಾನ್ ಮಾಡಿದ ಪ್ರತಿ])
- ವಯಸ್ಸಿನ ಪ್ರಮಾಣಪತ್ರ (ಸ್ಕ್ಯಾನ್ ಮಾಡಿದ ಪ್ರತಿ)
- ಗುರುತಿನ ಪುರಾವೆ (ಸ್ಕ್ಯಾನ್ ಮಾಡಿದ ಪ್ರತಿ)
- ಕುಟುಂಬದ ಆದಾಯ ಪ್ರಮಾಣ ಪತ್ರ (ಸ್ಕ್ಯಾನ್ ಮಾಡಿದ ಪ್ರತಿ)
- ಅರ್ಜಿದಾರರ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ / ಇ-ಮೇಲ್ ಐಡಿ
- ಬಾಡಿಗೆ ಒಪ್ಪಂದ (ಅನ್ವಯವಾದಲ್ಲಿ)
ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಜೂನ್ ತಿಂಗಳಲ್ಲಿ ಹೊಸ ಪಡಿತರ ಚೀಟಿ (New Ration Card) ಗಾಗಿ ಮತ್ತೆ ಅರ್ಜಿ ಸಲ್ಲಿಕೆ ಪ್ರಕ್ರೀಯೆ ಆರಂಭವಾಗಲಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಅರ್ಹ ನಾಗರೀಕರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಅರ್ಜಿ ಪರಿಶೀಲನೆ ಮಾಡಿ, ಅರ್ಹರಿಗೆ ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡಲು ಸರ್ಕಾರ ಮುಂದಾಗಿದೆ. ಲೋಕಸಭೆ ಚುನಾವಣೆಯ ನೀತಿ ಸಂಹಿತೆಯನ್ನು ತೆಗೆದ ನಂತರ ಈ ಎಲ್ಲ ಪ್ರಕ್ರೀಯೆ ನಡೆಯಲಿವೆ.
ಅರ್ಜಿ ಸಲ್ಲಿಸುವುದು ಹೇಗೆ:
ಬೇಕಾಗುವ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ Secugen ಬಯೋಮೆಟ್ರಿಕ್ ಸೌಲಭ್ಯವಿರುವ ನಿಮ್ಮ ಹತ್ತಿರದ CSC ಸೆಂಟರ್, ಸೈಬರ್ ಸೆಂಟರ್‌ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಹೊಸ ರೇಷನ್ ಕಾರ್ಡ್‌ಗೆ ಸಂಬಂಧಿಸಿ Latest ಮಾಹಿತಿ ಪಡೆಯಲು ನಮ್ಮ WhatsApp Group ಗೆ Join ಆಗಿ ಹಾಗೂ ನಮ್ಮ ವೆಬ್‌ಸೈಟ್ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ.
ಇತರೆ ಮಾಹಿತಿಗಳನ್ನು ಓದಿ:
HSRP ನಂಬರ್ ಪ್ಲೇಟ್ ಅಳವಡಿಸಿ, ಇಲ್ಲವೇ ದಂಡ ಗ್ಯಾರಂಟಿ