New Ration Card Karnataka: ನಮಸ್ಕಾರ, ನೀವು ಹೊಸ ರೇಷನ್ ಕಾರ್ಡ್ ಪಡೆಯಬೇಕಾ..? ಸರ್ಕಾರ ಕೊಡುವ ಪಡಿತರ ಚೀಟಿಯ ಎಲ್ಲ ಸೌಲಭ್ಯಗಳನ್ನು ನಿಮಗೂ ಬೇಕಾ..? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್. ಅದು ಏನಂತೀರಾ? ಈ ಲೇಖನದಲ್ಲಿ ಹೊಸ ರೇಷನ್ ಕಾರ್ಡ್‌ಗಳನ್ನು ವಿತರಣೆ ಮಾಡುವ ಬಗ್ಗೆ ಮಾಹಿತಿ ನೀಡಲಾಗಿದೆ ಓದಿರಿ.
ಹೌದು ಸ್ನೇಹಿತರೇ.. ಅನೇಕ ಅರ್ಹ ಜನರು ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಹಾಗೂ ಇನ್ನಿತರ ಸರ್ಕಾರದ ಹೊಸ ಹೊಸ ಯೋಜನೆಗಳ ಸೌಲಭ್ಯಕ್ಕಾಗಿ ಹೊಸ ಪಡಿತರ ಚೀಟಿ ಪಡೆಯಲು ಕಾತುರದಿಂದ ಕಾಯುತ್ತಿದ್ದರು.
ಆದರೆ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಹೊಸ ರೇಷನ್ ಕಾರ್ಡ್ ವಿತರಣೆಯನ್ನು ಸ್ಥಗಿತ ಮಾಡಲಾಗಿತ್ತು. ಇದೀಗ ಸರ್ಕಾರ ಅರ್ಹ ಫಲಾನುಭವಿಗಳಿಗೆ ಹೊಸ ಪಡಿತರ ಚೀಟಿ (New Ration Card) ಗಳನ್ನು ಕೊಡಲು ಮುಂದಾಗಿದೆ. ಈ ಸುದ್ದಿ ಬಡವರಿಗೆ ಖುಷಿ ನೀಡಿದೆ.
ಇದನ್ನು ಓದಿ: ಅನ್ನಭಾಗ್ಯ: ಅಕ್ಟೋಬರ್ DBT Status Check ಮಾಡಿ
ಇನ್ನೂ ಮುಂದಾದರು ಅವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಅಥವಾ ಕಡಿಮೆ ವೆಚ್ಚದಲ್ಲಿ ಚಿಕ್ಸಿತೆ ಪಡೆಯಲು ಅನುಕೂಲವಾಗಲಿದೆ. ಅದರಂತೆ ಸರ್ಕಾರ ಜಾರಿಗೆ ತಂದಿರುವ ಅನೇಕ ಯೋಜನೆಗಳ ಲಾಭವು ಬಡ ಜನರಿಗೆ ಸಿಗಲಿದೆ.
ನಮ್ಮ ರಾಜ್ಯದಲ್ಲಿ ಹೊಸ ಪಡಿತರ ಚೀಟಿಗಳನ್ನು ಪಡೆಯಲು ಒಟ್ಟು 2.90 ಲಕ್ಷ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದಷ್ಟು ಬೇಗ ಎಲ್ಲಾ ಅರ್ಜಿಗಳನ್ನು ಪರಿಶೀಲನೆ ಮಾಡಿ ಅರ್ಹತೆ ಹೊಂದಿರುವ ಕುಟುಂಬಗಳಿಗೆ ಹೊಸ ರೇಷನ್ ಕಾರ್ಡ್‌ಗಳನ್ನು ವಿತರಣೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಮಾಹಿತಿ ನೀಡಿದ್ದಾರೆ.
New Ration Card Karnataka
2,90,000 ಅರ್ಹ ಕುಟುಂಬಗಳಿಗೆ ಹೊಸ ಪಡಿತರ ಚೀಟಿಗಳನ್ನು ನೀಡಲು ಸರ್ಕಾರ ಈಗಾಗಲೇ ಮುಂದಾಗಿದೆ. ಇದು ಬರಗಾಲದಲ್ಲಿ ಬಡವರ ಪಾಲಿಗೆ ಸಂಜೀವಿನಿ ಎಂದರು ತಪ್ಪಲ್ಲ. BPL Ration Card, ಅಂತ್ಯೋದಯ Ration Card ಹೊಂದಿದವರಿಗೆ ಪ್ರತಿ ತಿಂಗಳು ಪ್ರತಿಯೊಬ್ಬರಿಗೆ 5 ಕೆಜಿ ಅಕ್ಕಿ ಮತ್ತು 5 ಕೆಜಿ ಅಕ್ಕಿ ಬದಲಿಗೆ 170 ರೂ. ನೀಡುತ್ತಿದ್ದಾರೆ.
ಇದರೊಂದಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಮನೆ ಯಜಮಾನಿಯರು 2000 ರೂ. ಪಡೆಯಬಹುದು. ಈ ಬರಗಾಲದ ಪರಿಸ್ಥಿತಿಯಲ್ಲಿ ಬಡ ಕುಟುಂಬಗಳಿಗೆ ಸಣ್ಣ ಪುಟ್ಟ ಅವಶ್ಯಕೆತೆಗಳಿಗೆ ಈ ಹಣ ನೆರವಾಗಲಿದೆ.
ಸರ್ಕಾರ ಇತರೆ ಯೋಜನೆಗಳು
ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ
Super