ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ: ವಿವಿಧ ಯೋಜನೆಗಳಿಗಾಗಿ ಅರ್ಜಿ ಆಹ್ವಾನ | Nijasharana Ambigara Choudayya Nigama Loan Schemes 2023 Apply Online

Telegram Group Join Now
WhatsApp Group Join Now

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ (Nijasharana Ambigara Choudayya Nigama Loan Schemes) ದಿಂದ 2023-24ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.

ಈ ಯೋಜನೆಗಳಡಿ ಸಾಲ-ಸೌಲಭ್ಯ ಪಡೆಯಲು ಸರ್ಕಾರದ ಆದೇಶ ಸಂಖ್ಯೆ: ಸಕಇ 225 ಬಿಸಿಎ 2000, ದಿನಾಂಕ: 30/03/2002 ರ ಆದೇಶದಲ್ಲಿನ ಪ್ರವರ್ಗ-1ರ 6(a) ಯಿಂದ 6 (ak) ವರೆಗೆ ಬರುವ ಬೆಸ್ತ, ಅಂಬಿಗ/ಅಂಬಿ, ಗಂಗಾಮತ, ಕಬ್ಬಲಿಗ, ಕೋಲಿ, ಮೊಗವೀರ ಮತ್ತು ಇದರ ಉಪ ಜಾತಿಗಳಿಗೆ ಒಳಪಡುವ ಅರ್ಹ ಫಲಾಪೇಕ್ಷಿಗಳು ಕಡ್ಡಾಯವಾಗಿ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಾಗಿರುತ್ತದೆ.

Nijasharana Ambigara Choudayya Nigama Loan Schemes

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದೊಳಗೆ ಸೇವಾ ಸಿಂಧು ಪೋರ್ಟಲ್‌ ಮೂಲಕ ಗ್ರಾಮ ಒನ್, ಕರ್ನಾಟಕ ಒನ್, ಮತ್ತು ಬೆಂಗಳೂರು ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. (ಅರಿವು ಶೈಕ್ಷಣಿಕ ಸಾಲ ಯೋಜನೆಗಳಿಗೆ ಕೊನೆಯ ದಿನಾಂಕ ಇರುವುದಿಲ್ಲ)

1) ಗಂಗಾ ಕಲ್ಯಾಣ ನೀರಾವರಿ ಯೋಜನೆ: 24 ಜಿಲ್ಲೆಗಳಿಗೆ ವೈಯಕ್ತಿಕ ನೀರಾವರಿ ಕೊಳವೆ ಬಾವಿ ಘಟಕದ ವೆಚ್ಚ ರೂ.3.75 ಲಕ್ಷಗಳು (ವಿದ್ಯುದ್ದೀಕರಣ ಸೇರಿದಂತೆ) ಇರುತ್ತದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಿಗೆ ಘಟಕ ವೆಚ್ಚ ರೂ.4.75 ಲಕ್ಷಗಳು (ವಿದ್ಯುದ್ದೀಕರಣ ಸೇರಿದಂತೆ) ಇದೆ. ಹಾಗೂ ಅವಶ್ಯವಿದ್ದಲ್ಲಿ ರೂ.50,000 ಸಾಲವನ್ನು ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು.

ವೈಯಕ್ತಿಕ ನೀರಾವರಿ ಕೊಳವೆ ಬಾವಿ ಘಟಕಕ್ಕೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಕರಾವಳಿ ಮತ್ತು ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ತೆರೆದ ಬಾವಿ ಮೂಲಕ ನೀರಾವರಿ ಸೌಲಭ್ಯ ಒದಗಿಸಲು ಅವಕಾಶ ಇರುತ್ತದೆ.

  • ಅರ್ಹತೆಗಳು
    • ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಜಮೀನು ಹೊಂದಿದ್ದು, ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿಲ್ಲದೆ ಇರುವ ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.
    • ವಾರ್ಷಿಕ ವರಮಾನ 98,000 ರೂ. ಮೀರಿರಬಾರದು.
    • ಅರ್ಜಿದಾರರ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು.
    • ಅರ್ಜಿದಾರರು ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಕನಿಷ್ಠ 02 ಎಕರೆ ಜಮೀನು ಹೊಂದಿರಬೇಕು.
    • ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು.
  • ಸಹಾಯಧನ:
    • ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಿಗೆ 4.75 ಲಕ್ಷ ರೂಪಾಯಿ.
    • ಇನ್ನೂಳಿದ ಜಿಲ್ಲೆಯವರಿಗೆ ರೂ.3.75 ಲಕ್ಷ ರೂಪಾಯಿ ಸಹಾಯಧನ.

2) ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ ಯೋಜನೆ:

  • ಅರ್ಜಿದಾರರ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98,000 ರೂಪಾಯಿ ಮೀರಿರಬಾರದು ಮತ್ತು ನಗರ ಪ್ರದೇಶದವರಿಗೆ ರೂ.1,20,000 ರೂಪಾಯಿ ಮಿತಿಯೊಳಗಿರಬೇಕು.
  • ಅರ್ಜಿದಾರರು 18 ವರ್ಷ ಮೇಲ್ಪಟ್ಟು 55 ವರ್ಷದ ಒಳಗಿನವರಾಗಿರಬೇಕು.

ಈ ಯೋಜನೆಯಲ್ಲಿ ಘಟಕ ವೆಚ್ಚದ ರೂ.1,00,00 ಗಳಿಗೆ ಶೇ.20 ರಷ್ಟು ಗರಿಷ್ಠ ರೂ.20,000 ಗಳ ಸಹಾಯಧನ ಉಳಿಕೆ ಶೇ.80 ರಷ್ಟು ಗರಿಷ್ಠ ರೂ.80,000 ಗಳ ವಾರ್ಷಿಕ ಶೇ.4 ರ ಬಡ್ಡಿದರದಲ್ಲಿ ಸಾಲ, ಘಟಕ ವೆಚ್ಚ ರೂ.1,00,001/- ರಿಂದ ರೂ.2,00,000/-ಗಳವರೆಗೆ ಶೇ.15 ರಷ್ಟು ಗರಿಷ್ಠ ರೂ.30,000/- ಗಳ ಸಹಾಯಧನ ಉಳಿಕೆ ಶೇ.85 ರಷ್ಟು ರೂ.1,70,000/-ಗಳಿಗೆ ವಾರ್ಷಿಕ ಶೇ.4 ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡುವುದು.

ಫಲಾನುಭವಿಯು ಒಂದು ಬಾರಿ ಸಾಲ ಪಡೆದು, ಪಡೆದ ಸಾಲವನ್ನು ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಮರು ಪಾವತಿಸಿದಲ್ಲಿ ಅಂತಹ ಫಲಾನುಭವಿಗಳಿಗೆ ಒಂದು ಬಾರಿಗೆ ಮಾತ್ರ ದುಪ್ಪಟ್ಟು ಸಾಲವನ್ನು ಗರಿಷ್ಠ ರೂ.2 ಲಕ್ಷಗಳವರೆಗೆ ಯಾವುದೇ ಸಹಾಯಧನವಿಲ್ಲದೇ ವಾರ್ಷಿಕ ಶೇ.4 ರ ಬಡ್ಡಿದರದಲ್ಲಿ ನೀಡಲಾಗುವುದು.

3) ಸ್ವಾವಲಂಬಿ ಸಾರಥಿ ಯೋಜನೆ:

  • ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ 98,000 ರೂಪಾಯಿ ಮೀರಿರಬಾರದು ಮತ್ತು ನಗರ ಪ್ರದೇಶದವರಿಗೆ ರೂ.1,20,000 ರೂಪಾಯಿ ಮಿತಿಯೊಳಗಿರಬೇಕು.
  • ಅರ್ಜಿದಾರರ ವಯಸ್ಸು 21 ವರ್ಷಗಳು ಹಾಗೂ ಗರಿಷ್ಠ 45 ವರ್ಷಗಳ ಮಿತಿಯೊಳಗಿರಬೇಕು.
  • ಈ ಯೋಜನೆಯ ಅಡಿಯಲ್ಲಿ ಆರ್ಥಿಕ ಸಹಾಯ ಪಡೆಯಲು ಇಚ್ಚಿಸುವ ಅರ್ಜಿದಾರರು ಲಘು ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕು.
  • ಅರ್ಜಿದಾರರು ನಿರುದ್ಯೋಗಿ ಆಗಿರಬೇಕು.
  • ಈ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಫಲಾನುಭವಿಯ ಸ್ವಯಂ ಟ್ಯಾಕ್ಸಿ ಚಾಲನೆ (Yellow Board) ಉದ್ದೇಶಕ್ಕೆ ವಾಹನವನ್ನು ನೋಂದಾಯಿಸತಕ್ಕದ್ದು.
  • ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರಗಳ (ಟ್ಯಾಕ್ಸಿ, ಟಾಟಾ ಎಸಿ, ಗೂಡ್ಸ್‌) ವಾಹನವನ್ನು ಖರೀದಿಸಲು ರಾಷ್ಟ್ರೀಕೃತ ಬ್ಯಾಂಕ್ /ಗ್ರಾಮೀಣ ಬ್ಯಾಂಕ್‌ಗಳು ಮಂಜೂರು ಮಾಡಿದ ಸಾಲಕ್ಕೆ ಶೇ.50 ರಷ್ಟು ಅಥವಾ ಗರಿಷ್ಠ ರೂ.3 ಲಕ್ಷಗಳವರೆಗೆ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು.
  • ಬ್ಯಾಂಕ್‌ ಪಾಲಿನ ಸಾಲಕ್ಕೆ ಬ್ಯಾಂಕ್‌ ನಿಗಧಿಪಡಿಸುವ ಚಾಲ್ತಿ ದರದ ಬಡ್ಡಿಯೊಂದಿಗೆ ಸಾಲದ ಮೊತ್ತವನ್ನು ನಿಗದಿತ ಕಂತುಗಳಲ್ಲಿ ಮರುಪಾವತಿಸಬೇಕು.

4) ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದೊಂದಿಗೆ):

  • ಅರ್ಜಿದಾರರ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98,000 ರೂಪಾಯಿ ಮೀರಿರಬಾರದು ಮತ್ತು ನಗರ ಪ್ರದೇಶದವರಿಗೆ ರೂ.1,20,000 ರೂಪಾಯಿ ಮಿತಿಯೊಳಗಿರಬೇಕು.
  • ಅರ್ಜಿದಾರರು 18 ವರ್ಷ ಮೇಲ್ಪಟ್ಟು 55 ವರ್ಷದ ಒಳಗಿನವರಾಗಿರಬೇಕು.
  • ಈ ಯೋಜನೆಯಡಿ ಸ್ವಯಂ ಉದ್ಯೋಗ ಪ್ರಾರಂಭಿಸಲು ವಾಣಿಜ್ಯ ಬ್ಯಾಂಕುಗಳ ಮೂಲಕ ಸಾಲ ಪಡೆದಲ್ಲಿ ನಿಗಮದಿಂದ ಶೇ.20 ರಷ್ಟು ಅಥವಾ ಗರಿಷ್ಠ ರೂ.1 ಲಕ್ಷಗಳ ಸಹಾಯಧನವನ್ನು ವಾಣಿಜ್ಯ ಬ್ಯಾಂಕ್‌ಗಳ ಮೂಲಕ ನೀಡುವುದು.
  • ಬ್ಯಾಂಕ್‌ಗಳು ಮಂಜೂರು ಮಾಡುವ ಸಾಲಕ್ಕೆ ಬ್ಯಾಂಕ್‌ಗಳ ಚಾಲ್ತಿಯಲ್ಲಿರುವ ಬಡ್ಡಿ ವಿಧಿಸಲಾಗುತ್ತದೆ.

5) ಅರಿವು ಶೈಕ್ಷಣಿಕ ಸಾಲ ಯೋಜನೆ (ಹೊಸತು): ಕರ್ನಾಟಕ ರಾಜ್ಯದಲ್ಲಿ ವೃತ್ತಿಪರ, ತಾಂತ್ರಿಕ ಇತ್ಯಾದಿ ಉನ್ನತ ಕೋರ್ಸ್‌ಗಳ ವ್ಯಾಸಂಗಕ್ಕೆ ಪ್ರವೇಶ ಪರೀಕ್ಷಾ ಪ್ರಾಧಿಕಾರಿಂದ (ಸಿ.ಇ.ಟಿ/ಎನ್.ಇ.ಇ.ಟಿ) ಸೀಟು ಪಡೆದು ಕಾಲೇಜೆಗೆ ಸೇರ್ಪಡೆಯಾದವರಿಗೆ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲದ ಮೊತ್ತಕ್ಕೆ ವಾರ್ಷಿಕವಾಗಿ ಗರಿಷ್ಠ ರೂ.1 ಲಕ್ಷಗಳನ್ನು ಶೇ.2 ರ ಬಡ್ಡಿದರದಲ್ಲಿ ಸಾಲ ನೀಡುವುದು.

ಇರಬೇಕಾದ ಅರ್ಹತೆಗಳು ವಿದ್ಯಾರ್ಥಿ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನವು ಎಲ್ಲಾ ಮೂಲಗಳಿಂದ ರೂ.3.50 ಲಕ್ಷಗಳನ್ನು ಮೀರಿರಬಾರದು. ವಿದ್ಯಾರ್ಥಿಯ ವಯಸ್ಸು 35 ವರ್ಷ ಮೀರಿರಬಾರದು.

ವಿದ್ಯಾರ್ಥಿಯು ಸರ್ಕಾರಿ ಕಾಲೇಜು/ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನ ರಹಿತ, ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ/ತಾಂತ್ರಿಕ/ಉನ್ನತ ವ್ಯಾಸಂಗದ ಕೋರ್ಸ್‌ಗಳಲ್ಲಿ ಸಿ.ಇ.ಟಿ/ಎನ್.ಇ.ಇ.ಟಿ ಮೂಲಕ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರಬೇಕು. ವಿದ್ಯಾರ್ಥಿಯು ಶೈಕ್ಷಣಿಕ ಉದ್ದೇಶಕ್ಕೆ ಇತರೆ ಯಾವುದೇ ಬ್ಯಾಂಕ್/ಆರ್ಥಿಕ ಸಂಸ್ಥೆಗಳಿಂದ ಸಾಲ ಪಡೆದಿರಬಾರದು.

ಅರಿವು ಶೈಕ್ಷಣಿಕ ಸಾಲ ಯೋಜನೆ (ನವೀಕರಣ): Nijasharana Ambigara Choudayya Nigama ವ್ಯಾಪ್ತಿಗೆ ಒಳಪಡುವ ವಿದ್ಯಾರ್ಥಿಗಳು ಈಗಾಗಲೇ ಹಿಂದಿನ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಾಲ ಪಡೆದಿರುವ ವಿದ್ಯಾರ್ಥಿಗಳು 2020-21ನೇ ಸಾಲಿನ 04 ನೇ ಕಂತು ಮತ್ತು 2022-23ನೇ ಸಾಲಿನ 02 ಕಂತುಗಳ ಸಾಲ ಪಡೆಯಲು ವ್ಯಾಸಂಗ ದೃಢೀಕರಣ ಮತ್ತು ಅಂಕಪಟ್ಟಿ ಸಲ್ಲಿಸುವುದು.

ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಆರ್ಥಿಕ ನೆರವು: ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪಿಹೆಚ್.ಡಿ ಪೋಸ್ಟ್ ಡಾಕ್ಟೋರಲ್ ಮತ್ತು ಮಾಸ್ಟರ್ ಡಿಗ್ರಿ ಹಾಗೂ ತಾಂತ್ರಿಕ ಮತ್ತು ವೈದ್ಯಕೀಯ ಇತ್ಯಾದಿ ಉನ್ನತ ಕೋರ್ಸ್‌ಗಳ ವ್ಯಾಸಂಗಕ್ಕೆ (QS World Ranking 500) ಪ್ರವೇಶ ಪಡೆದವರಿಗೆ ಸಾಲದ ಮೊತ್ತ ವಾರ್ಷಿಕ ಗರಿಷ್ಠ ರೂ.5 ಲಕ್ಷಗಳಂತೆ ಶೂನ್ಯ ಬಡ್ಡಿದರದಲ್ಲಿ ರೂ.20 ಲಕ್ಷಗಳ ಸಾಲ-ಸೌಲಭ್ಯ ಒದಗಿಸಲಾಗುವುದು.

ಸಾಮಾನ್ಯ ಅರ್ಹತೆಗಳು ಮತ್ತು ನಿಬಂಧನೆಗಳು:

  • ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಕೇಂದ್ರ ಆಧಾರ್ ಅಧಿನಿಯಮ, 2016 ಸೆಕ್ಷನ್ (7)ರಡಿ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಅರ್ಜಿದಾರರ ಹೆಸರು, ಆಧಾರ್ ಕಾರ್ಡ್, ಜಾತಿ/ಆದಾಯ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಖಾತೆಗಳಲ್ಲಿ ಹೊಂದಾಣಿಕೆ ಆಗಿರಬೇಕು.
  • ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ.
  • ನಿಗಮದ/ಸರ್ಕಾರದ ಯಾವುದಾದರೂ ಯೋಜನೆಗಳಡಿ ಈ ಹಿಂದೆ ಸೌಲಭ್ಯ
    ಪಡೆದಿರಬಾರದು.
  • ಕುಟುಂಬದ ಒಬ್ಬರಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು.
  • ಸರ್ಕಾರ/ನಿಗಮವು ಕಾಲಕಾಲಕ್ಕೆ ವಿಧಿಸುವ ಇನ್ನಿತರ ಅರ್ಹತೆ/ ನಿಬಂಧನೆಗಳನ್ನು ಹೊಂದಿದವರಾಗಿರಬೇಕು.
  • ಸರ್ಕಾರ ಮತ್ತು ನಿರ್ದೇಶಕ ಮಂಡಳಿ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯ ಬಯಸುವವರು ಸಹ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಅಗತ್ಯವಾಗಿರುತ್ತದೆ.

ವಿಶೇಷ ಸೂಚನೆ:

  • ಅನುದಾನದ ಲಭ್ಯತೆಗೆ ಅನುಗುಣವಾಗಿ ಯೋಜನೆಯನ್ನು ಸೌಲಭ್ಯವನ್ನು ಜಾರಿಗೊಳಿಸಲಾಗುವುದು.
  • ಯೋಜನೆಗಳ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆಗಳಾದಲ್ಲಿ, ದಿನಾಂಕದಿಂದ ಜಾರಿಗೆ ಬರುವಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು.
  • ಹೆಚ್ಚಿನ ಮಾಹಿತಿಯನ್ನು ಸಂಬಂಧಪಟ್ಟ ಜಿಲ್ಲೆಗಳಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿ./ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಯಲ್ಲಿ ನಿಗಮದ ambigaradevelopment.karnataka.gov.in ಪಡೆಯಬಹುದಾಗಿದೆ.
  • ನಿಗಮದ ಸಹಾಯವಾಣಿ (Helpline) ಸಂಖ್ಯೆ 080-22864099ಗೆ ಕಛೇರಿ ಸಮಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5:30 ರವರೆಗೆ ಸಂಪರ್ಕಿಸಬಹುದಾಗಿದೆ.
  • ಅರ್ಜಿದಾರರು ಅರ್ಜಿಗಳನ್ನು ದಿನಾಂಕ 02-11-2023 ರವರೆಗೆ ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್‌ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.

Nijasharana Ambigara Choudayya Nigama Loan Schemes Application Link:
ಆನ್‌ಲೈನ್‌ ಅರ್ಜಿ ಲಿಂಕ್‌:
ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ವೆಬ್‌ಸೈಟ್:‌ ambigaradevelopment.karnataka.gov.in, https://sevasindhu.karnataka.gov.in

Nijasharana Ambigara Choudayya Nigama Loan Schemes 2023 Last Date:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-11-2023

ಇತರೆ ಮಾಹಿತಿಗಳನ್ನು ಓದಿ

ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೆ ಬಂದಿಲ್ಲವೇ

ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

ಸವಿತಾ ಸಮಾಜ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗಾಗಿ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment

error: Content is protected !!