ಎಲ್ಲರಿಗೂ ನಮಸ್ಕಾರ, ಬಡತನ ರೇಖೆಗಿಂತ ಕೆಳಗಿರುವವರಿಗೆ ಸರ್ಕಾರ ರೇಷನ್ ಕಾರ್ಡ್ ಅನ್ನು ನೀಡುತ್ತದೆ. ರೇಷನ್ ಕಾರ್ಡ್ (Ration Card eKYC Karnataka) ಹೊಂದಿರುವ ಫಲಾನುಭವಿಗಳಿಗೆ ಸರ್ಕಾರವು ನೀಡುತ್ತಿರುವ ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಮುಂತಾದ ಯೋಜನೆಗಳ ಲಾಭ ದೊರೆಯಲಿದೆ. ಹೀಗೆ ರೇಷನ್ ಹೊಂದಿದವರಿಗೆ ಹಲವಾರು ಸರ್ಕಾರಿ ಸೌಲಭ್ಯಗಳು ದೊರೆಯುತ್ತವೆ.
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯು ಒಂದಾಗಿದ್ದು, ಈ ಯೋಜನೆಯ ಮೂಲಕ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಪ್ರತಿ ತಿಂಗಳು ಉಚಿತವಾಗಿ ಪಡಿತರವನ್ನು ನೀಡುತ್ತಾರೆ. ಇದರಿಂದಾಗಿ ಸಾಕಷ್ಟು ಬಡ ಕುಟುಂಬಗಳಿಗೆ ಅನುಕೂಲವಾಗುತ್ತಿದೆ.
Ration Card eKYC Karnataka 2025:
ರೇಷನ್ ಕಾರ್ಡ್ ಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಅಗಿದೆಯಾ ಎಂಬುದನ್ನು ಚೆಕ್ ಮಾಡಿಸಿಕೊಳ್ಳಿ, ಹಾಗೂ ಪಡಿತರ ಚೀಟಿಯಲ್ಲಿನ ಬೆರಳಚ್ಚು (ಬಯೋಮೆಟ್ರಿಕ್) ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನ್ಯಾಯಬೆಲೆ ಅಂಗಡಿಯಲ್ಲಿ ಪರಿಶೀಸಿಕೊಳ್ಳಬೇಕು.
ರೇಷನ್ ಕಾರ್ಡ್ ಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ಇ-ಕೆವೈಸಿ ಮಾಡಿಸಲು ಇದೇ ತಿಂಗಳು ಜೂ.30 ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವ ಸದಸ್ಯರ ಬೆರಳಚ್ಚು ಹೊಂದಾಣಿಕೆಯಾಗುತ್ತಿಲ್ಲ ಅಂತವರು ಕೂಡಲೆ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.
ಇತರೆ ಮಾಹಿತಿಗಳು:

