ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಜೂನ್ 18 ರಿಂದ ಗೃಹ ಜ್ಯೋತಿ (Gruha Jyothi Scheme Apply Online) ಯೋಜನೆಯ ಆನ್ ಲೈನ್ ಅರ್ಜಿ ಆಂಭವಾಗಿದೆ ಆದರೆ ಸರ್ವರ್ ಸಮಸ್ಯೆಯಿಂದಾಗಿ ಬಹಳಷ್ಟು ಜನರಿಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ.
ಅದರಿಂದಾಗಿ ಜನರಲ್ಲಿ ಗೊಂದಲ ಉಂಟಾಗಿದ್ದು, ಈ ಯೋಜನೆಯ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ ಭಯ ಪಡುವುದು ಅಗತ್ಯವಿಲ್ಲ ಇದೀಗ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ 200 ಯುನಿಟ್ ವರೆಗಿನ ಉಚಿತ ವಿದ್ಯುತ್ ಪಡೆಯಲು ಮೊದಲಿಗೆ ಸೇವಾ ಸಿಂಧು ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಹೇಗೆ ಅರ್ಜಿ ಸಲ್ಲಿಸುವುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಿದ್ದೆವೆ.
ರಾಜ್ಯದ ಗೃಹಬಳಕೆಯ ಗ್ರಾಹಕರಿಗೆ 200 ಯೂನಿಟ್’ಗಳ ವರೆಗೆ ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಗೃಹ ಜ್ಯೋತಿ (Gruha Jyothi Scheme Apply Online) ಅರ್ಜಿ ದಿನಾಂಕದ ಮಾಹಿತಿ:
ಸೇವಾ ಸಿಂಧು ಪೋರ್ಟಲ್ ನಲ್ಲಿ ರಾಜ್ಯ ಜನರು ಏಕಕಾಲದಲ್ಲಿ ಅರ್ಜಿ ಸಲ್ಲಿಸುತ್ತಿರುವುದರಿಂದ ಸರ್ವರ್ ಸಮಸ್ಯೆ ಉಂಟಾಗುತ್ತಿದೆ. ಇದರಿಂದಾಗಿ ಫಲಾನುಭವಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಆದರೆ ಗೊಂದಲ ಮಾಡಿಕೊಳ್ಳಬೇಡಿ ಗೃಹ ಜ್ಯೋತಿ ಯೋಜನೆ (Gruha Jyothi Scheme Application) ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಿಲ್ಲ ಎಂದು ಹೆಸ್ಕಾಂ ಎಂಡಿ ಮಹಮ್ಮದ್ ರೋಷನ್ ಮಾಹಿತಿ ನೀಡಿದ್ದಾರೆ.
ಗೃಹ ಜ್ಯೋತಿ (Gruha Jyoti Yojane) ಸರ್ವರ್ ಸಮಸ್ಯೆ ಮತ್ತು ಪರಿಹಾರ:
ಗೃಹ ಜ್ಯೋತಿ ಯೋಜನೆಯ ಆನ್ ಲೈನ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸೇವಾ ಸಿಂಧು ಪೋರ್ಟಲ್ ಸರ್ವರ್ ಡೌನ್ ಆಗುತ್ತಿದೆ ಇದರಿಂದಾಗಿ ನಿಮಗೆ ತೊಂದರೆ ಉಂಟಾಗುತ್ತಿದೆ. ಸಾಧ್ಯವಾದರೆ ತಾವುಗಳು ರಾತ್ರಿ ಸಮಯದಲ್ಲಿ ಅರ್ಜಿ ಸಲ್ಲಿಸಲು ಪ್ರಯತ್ನಿಸಿ. ರಾಜ್ಯದ ಎಲ್ಲ ಜನರು ಏಕಕಾಲದಲ್ಲಿ ಅರ್ಜಿ ಭರ್ತಿ ಮಾಡುತ್ತಿರುವುದರಿಂದ ಈ ಸಮಸ್ಯೆ ಉಂಟಾಗುತ್ತಿದೆ. ನೀವು ಅರ್ಜಿಯನ್ನು ಭರ್ತಿ ಮಾಡಲು ಮೇಲಿಂದಮೇಲೆ ಪ್ರಯತ್ನಿಸಿ ಎಂದು ಈಗಾಗಲೇ ಅರ್ಜಿ ಸಲ್ಲಿಸಿದವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಗೃಹ ಜ್ಯೋತಿ ಅರ್ಜಿ ಸಲ್ಲಿಸುವುದು ಹೇಗೆ? How To Apply For Gruha Jyothi in Kannada?
ಗೃಹ ಜ್ಯೋತಿ ಯೋಜನೆಯ ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಸಲ್ಲಿಸಬಹುದು. ಅರ್ಜಿ ಅಧಿಕೃತ ಲಿಂಕ್’ನ್ನು ಕೇಳಗೆ ನೀಡಲಾಗಿದೆ.
Step-1: “ಗೃಹ ಜ್ಯೋತಿ” ಯೋಜನೆ ಅಡಿಯಲ್ಲಿ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಗ್ರಾಹಕರು ಕೇಳಗೆ ನೀಡಿರುವ ಸೇವಾ ಸಿಂಧು ಪೋರ್ಟಲ್ ಲಿಂಕ್ (sevasindhugs.karnataka.gov.in gruhajyothi) ಮೇಲೆ ಕ್ಲಿಕ್ ಮಾಡಿ.
Step-2: ಅಲ್ಲಿ “ಗೃಹ ಜ್ಯೋತಿ” ಎಂಬುದರ ಮೇಲೆ ಕ್ಲಿಕ್ ಮಾಡಿ.
Step-3: ಮುಂದಿನ ಲಿಂಕ್ನಲ್ಲಿ “ಗೃಹ ಜ್ಯೋತಿ” Gruha Jyoti Scheme ಆನ್ಲೈನ್ ಅರ್ಜಿ ಸಿಗುತ್ತದೆ.
Step-4: ನಂತರ ಅಲ್ಲಿ ಎಸ್ಕಾಂ ಹೆಸರು, Account ID/Connection ID, ನಿಮ್ಮ ಹೆಸರು, ವಿಳಾಸ (ವಿದ್ಯುತ್ ಬಿಲ್ನಲ್ಲಿರುವಂತೆ/ ಎಸ್ಕಾಂ ನಲ್ಲಿರುವಂತೆ) ವನ್ನು ಅಲ್ಲಿ ತುಂಬಿರಿ.

Step-5: ಆದಾದ ನಂತರ ನೀವು ಮಾಲಿಕರ ಅಥವಾ ಬಾಡಿಗೆದಾರರ ಎನ್ನುವುದನ್ನು ನಮೂದಿಸಬೇಕು, ನಿಮ್ಮ ಆಧಾರ ಸಂಖ್ಯೆ, ಆಧಾರ ಕಾರ್ಡ್ ನಲ್ಲಿ ಇರುವಂತೆ ನಿಮ್ಮ ಹೆಸರನ್ನು, ನಿಮ್ಮ ಮೊಬೈಲ್ ನಂಬರ್ʼನ್ನು ಅಲ್ಲಿ ಭರ್ತಿ ಮಾಡಬೇಕು.

Step-6: I Agree ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.

Step-7: ಕಡೆಯದಾಗಿ Word verification ಅಂತ ಇರುವಲ್ಲಿ ಅಲ್ಲಿ ಕಾಣುವ ನಂಬರ್ʼನ್ನು ಕೇಳಗೆ ನೀಡಿರುವ ಬಾಕ್ಸʼನಲ್ಲಿ ತುಂಬಬೇಕು. ನಂತರ Submit ಮೇಲೆ ಕ್ಲಿಕ್ ಮಾಡಿ. ಅಲ್ಲಿಗೆ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ. ಸ್ವೀಕೃತಿ ಪ್ರತಿಯನ್ನು ಡೌನ್’ಲೋಡ್ ಅಥವಾ ScreeShot ತೆಗೆದುಕೊಳ್ಳಿ. ಸಾಧ್ಯವಾದರೆ ಅದನ್ನು ಪ್ರಿಂಟ್ ಮಾಡಿಕೊಳ್ಳಿ.
Gruha Jyothi Scheme Apply Links
“ಗೃಹ ಜ್ಯೋತಿ” (Gruha Jyothi Scheme) ಯೋಜನೆ ವೆಬ್ಸೈಟ್ New Link 1: ಇಲ್ಲಿ ಕ್ಲಿಕ್ ಮಾಡಿ
Griha Jyoti Link 2: ಇಲ್ಲಿ ಕ್ಲಿಕ್ ಮಾಡಿ
Seva Sindhu Gruha Jyothi ವೆಬ್ಸೈಟ್ ಲಿಂಕ್ 3: ಇಲ್ಲಿ ಕ್ಲಿಕ್ ಮಾಡಿ
ಸೇವಾ ಸಿಂಧು ಪೋರ್ಟಲ್ ಲಿಂಕ್ 4: sevasindhu.karnataka.gov.in
Gruha Jyoti ಲಿಂಕ್ 5: https://sevasindhugs1.karnataka.gov.in/,
Gruha Jyothi Scheme Application Link 6: https://sevasindhugs.karnataka.gov.in/Gruha Jyothi
ಸರ್ಕಾರ ಇತರೆ ಯೋಜನೆಗಳು