ಎಲ್ಲರಿಗೂ ನಮಸ್ಕಾರ, ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ? ನಿಮಗೆ 2,000 ರೂ. ಹಣ ಬಂದಿಲ್ಲವೇ..? ಹಾಗಿದ್ದರೇ ನಿಮ್ಮ ಸಮಸ್ಯೆ ಪರಿಹರಿಸಲು ಸರ್ಕಾರ ಮುಂದಾಗಿದೆ. ಗೃಹಲಕ್ಷ್ಮಿ (Gruhalakshmi Scheme in Karnataka) ಅರ್ಜಿದಾರರ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಅದು ಏನೂ ಅಂತೀರಾ? ಹಾಗಿದ್ದರೆ ಈ ಮಾಹಿತಿಯನ್ನು ಓದಿ.
ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸಿಎಂ ಸಿದ್ದರಾಮಯ್ಯ ನೇತತ್ವದ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದ್ದು, ಮನೆ ಯಜಮಾನಿಯರ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು 2,000 ರೂ. ಜಮಾ ಮಾಡುತ್ತಿದೆ. ಆದರೆ ಕೆಲ ಯಜಮಾನಿಯರಿಗೆ ತಾಂತ್ರಿಕ ಕಾರಣದಿಂದ ಹಣ ಜಮಾ ಆಗಿಲ್ಲ. ಅದನ್ನು ಪರಿಹರಿಸಲು ಸರ್ಕಾರ ವಿಶೇಷ ಶಿಬಿರ ಆಯೋಜಿಸಿದೆ.
Gruhalakshmi Scheme in Karnataka
ಗೃಹಲಕ್ಷ್ಮಿ ಯೋಜನೆಯ ಅರ್ಜಿದಾರರ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಇದೇ ಬುಧವಾರದಿಂದ ಶುಕ್ರವಾರದವರೆಗೆ (ಡಿ. 27 ರಿಂದ 29 ರವೆರಗೆ) ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಶಿಬಿರ ಆಯೋಜಿಸಲಾಗಿದೆ.
ಪಂಚಾಯತ್ ರಾಜ್ ಅಧಿಕಾರಿಗಳ ನೇತೃತ್ವದಲ್ಲಿ ಈ ಶಿಬಿರ ನಡೆಯಲಿದ್ದು, ಬಾಪೂಜಿ ಸೇವಾ ಕೇಂದ್ರದ ಕಂಪ್ಯೂಟರ್ ನಿರ್ವಾಹಕರು, ಅಂಗನವಾಡಿ ಕಾರ್ಯಕರ್ತರು, ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸಸ್ (ಇ.ಡಿ.ಸಿ) ತಂಡಗಳ ಸಿಬ್ಬಂದಿ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಹಾಗೂ ಇತರ ಬ್ಯಾಂಕ್‌ಗಳ ಪ್ರತಿನಿಧಿಗಳು ಈ ಶಿಬಿರದಲ್ಲಿ ಭಾಗವಹಿಸುತ್ತಾರೆ.
ಯಾವ ಸಮಸ್ಯೆಗಳಿಗೆ ಪರಿಹಾರ:
- ಆಧಾರ್ ಜೋಡಣೆ
- ಬ್ಯಾಂಕ್ ಸಮಸ್ಯೆ
- ಇ-ಕೆವೈಸಿ ಅಪ್ಲೇಟ್
- ಹೊಸ ಬ್ಯಾಂಕ್ ಖಾತೆ ಆರಂಭ
ತರಬೇಕಾದ ದಾಖಲೆಗಳು:
- ತಮ್ಮ ಆಧಾರ್ ಕಾರ್ಡ್
- ಪತಿಯ ಆಧಾರ್ ಕಾರ್ಡ್
- ಪಡಿತರ ಚೀಟಿ
- ಬ್ಯಾಂಕ್ ಪಾಸ್ ಪುಸ್ತಕ
ದಿನಾಂಕ ಮತ್ತು ಸಮಯ:
ದಿನಾಂಕ: ಡಿಸೆಂಬರ್ 27, 28 ಮತ್ತು 29
ಸಮಯ: ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ
ಸ್ಥಳ: ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನಿಮ್ಮ ಸಮಸ್ಯೆಗಳಿಗೆ ವಿಶೇಷ ಶಿಬಿರ ಇರಲಿದೆ.
ಕೊನೆಯ ಮಾತು: ನಾವು ಗೃಹಲಕ್ಷ್ಮಿ ಯೋಜನೆ (Gruhalakshmi Scheme in Karnataka) ಯ ಅರ್ಜಿದಾರರ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ವಿಶೇಷ ಶಿಬಿರ ಕುರಿತು ನಾವು ನೀಡಿರುವ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಇದೇ ರೀತಿಯ ಮಾಹಿತಿಗಳನ್ನು ಪಡೆಯಲು ನಮ್ಮ WhatsApp Group ಗೆ Join ಆಗಿರಿ. ಧನ್ಯವಾದಗಳು..
ಇತರೆ ಮಾಹಿತಿಗಳನ್ನು ಓದಿ
BPL ಕಾರ್ಡ್ ಇದ್ದವರು ಈ ಕೆಲಸ ಮಾಡಿ, ರದ್ದಾಗುತ್ತದೆ ನಿಮ್ಮ ರೇಷನ್ ಕಾರ್ಡ್..!