ಗೃಹ ಲಕ್ಷ್ಮೀ ಯೋಜನೆ ಜಾರಿಗೆ ಬಂದಿರುವುದುರಿಂದ ರೇಷನ್ ಕಾರ್ಡ್‌ಗೆ ಬೇಡಿಕೆ ಹೆಚ್ಚಾಗಿದೆ. ಅನೇಕರು BPL, APL ರೇಷನ್ ಕಾರ್ಡ್ ಪಡೆಯಲು ಕಾಯುತ್ತಿದ್ದಾರೆ. ಆದರೆ ಸರ್ಕಾರ ಕಟ್ಟು ನಿಟ್ಟಿನ ಹೊಸ ನಿಯಮ ಜಾರಿಗೆ ತರಲು (Karnataka Ration Card New Rules) ಮುಂದಾಗಿದೆ.
Karnataka Ration Card New Rules
BPL ಕಾರ್ಡ್ ಹೊಂದಿರುವ ಅನೇಕ ಕುಟುಂಬಗಳಿಗೆ ಸರ್ಕಾರ ಶಾಕ್ ನೀಡಿದ್ದು, ಸ್ವಂತಃ ಕಾರು ಹೊಂದಿರುವ ಕುಟುಂಬದ BPL ಕಾರ್ಡ್ ರದ್ದಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ K.H ಮುನಿಯಪ್ಪ ಘೋಷನೆ ಮಾಡಿದ್ದಾರೆ.
ಸ್ವಂತ ಕಾರ್ಡ್ ಹೊಂದಿದವರಿಗೆ ಹೊಸ BPL ಕಾರ್ಡ್ ನೀಡದಿರುವುದು ಹಾಗೂ ಈಗ ಇರುವ ಕಾರ್ಡ್‌ನ್ನು ರದ್ದು ಮಾಡಲಿದ್ದಾರೆ. ವೈಟ್ ಬೋರ್ಡ್ ಕಾರು ಇರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ಆಗಲಿದ್ದು, ಯೆಲ್ಲೋ ಬೋರ್ಡ್ ಕಾರು ಇರುವವರ ಬಿಪಿಎಲ್ ಕಾರ್ಡ್ ರದ್ದನ್ನು ಹಿಂಪಡೆಯಲು ಚಿಂತನೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ದುಡಿಯುವ ಉದ್ದೇಶದಿಂದ ಯೆಲ್ಲೋ ಬೋರ್ಡ್ ಕಾರು ಹೊಂದಿರುವವರ ಕಾರ್ಡನ್ನು ರದ್ದು ಮಾಡುವುದಿಲ್ಲ. ಸ್ವಂತ ಕಾರನ್ನು ಹೊಂದಿರುವ ಕುಟುಂಬದ ಕಾರ್ಡ್ ಮಾತ್ರ ರದ್ದಾಗಲಿದೆ ಎಂದಿದ್ದಾರೆ.
ಬಡತನ ರೇಖೆಗಿಂತ ಕೇಳಗಿರುವ ಕುಟುಂಬಗಳಿಗೆ ಸರ್ಕಾರ ಬಿಪಿಎಲ್ ಕಾರ್ಡ್ ನೀಡುತ್ತದೆ ಆದರೆ ಶ್ರೀಮಂತರು ಕೂಡ ಈ ಕಾರ್ಡ್ ಹೊಂದುವುದರಿಂದ ಸರ್ಕಾರಕ್ಕೆ ಆರ್ಥಿಕವಾಗಿ ಹೊರೆಯಾಗುತ್ತಿದೆ.
ಚುಣಾವಣೆ ಕಾರಣದಿಂದ ನೀತಿ ಸಂಹಿತಿ ಜಾರಿ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್ ವಿತರಣೆ ಸ್ಥಗಿತವಾಗಿತ್ತು. ಅರ್ಹ ಕುಟುಂಬಗಳಿಗೆ ಹೊಸ ರೇಷನ್ ಕಾರ್ಡ್ ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಪಡಿತರ ಚೀಟಿಗೆ ಹೊಸ ಸದಸ್ಯರ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗುವುದು ಎಂದು ಸಚಿವ K.H ಮುನಿಯಪ್ಪ ತಿಳಿಸಿದ್ದಾರೆ.
✅ರೇಷನ್ ಕಾರ್ಡ್ ತಿದ್ದುಪಡಿ, ಸದಸ್ಯರ ಸೇರ್ಪಡೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್
“ಗೃಹ ಲಕ್ಷ್ಮೀ” ಯೋಜನೆ 2023 ಅರ್ಜಿ